ಶಾರ್ಜಾ ಪುಸ್ತಕ ಮೇಳದಲ್ಲಿ ‘ನನ್ನ ಅರಿವಿನ ಪ್ರವಾದಿ’ ಕೃತಿ ಬಿಡುಗಡೆ

ಮಂಗಳೂರು: ಲೇಖಕ ಯೋಗೀಶ್ ಮಾಸ್ಟರ್ ರಚಿಸಿದ ‘ನನ್ನ ಅರಿವಿನ ಪ್ರವಾದಿ’ ಕೃತಿಯನ್ನು ಶಾರ್ಜಾ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಶನಿವಾರ ಉದ್ಯಮಿ, ಅನಿವಾಸಿ ಕನ್ನಡಿಗ ಇಬ್ರಾಹೀಮ್ ಗಡಿಯಾರ್ ಬಿಡುಗಡೆಗೊಳಿಸಿದರು.
ಅತಿಥಿಗಳಾಗಿದ್ದ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹರೀಶ್ ಕೋಡಿ, ಸಾಹಿತಿ ಅಬ್ದುರ‌್ರಹ್ಮಾನ್ ಕುತ್ತೆತ್ತೂರು ಪ್ರತಿಯನ್ನು ಸ್ವೀಕರಿಸಿ ಶುಭ ಹಾರೈಸಿದರು.
ಶಾಜಾ ಎಕ್ಸ್‌ಪೋ ಸೆಂಟರ್‌ನಲ್ಲಿ ನ.1ರಂದು ಆರಂಭಗೊಂಡ 42ನೆ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ 108 ದೇಶಗಳ ಪ್ರಕಾಶನ ಸಂಸ್ಥೆಗಳು ಭಾಗವಹಿಸುತ್ತಿದೆ. ನ.12ರಂದು ಇದು ಮುಕ್ತಾಯಗೊಳ್ಳಲಿದೆ. ಕರ್ನಾಟಕದ ಶಾಂತಿ ಪ್ರಕಾಶನವು ಸತತ ಏಳು ವರ್ಷಗಳಿಂದ ಈ ಮೇಳದಲ್ಲಿ ಭಾಗವಹಿಸುತ್ತಿವೆ.
Next Story





