ಇಂಟಾಕ್ ಮಂಗಳೂರು ವತಿಯಿಂದ ’ನಮ್ಮ ಊರು ನಮ್ಮ ನೆಲ’ ಕಲಾ ಪ್ರದರ್ಶನಕ್ಕೆ ಚಾಲನೆ

ಮಂಗಳೂರು, ನ.23: ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆಯಾದ ಇಂಟಾಕ್ ನ ಮಂಗಳೂರು ವಿಭಾಗವು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ ವಿಶ್ವ ಪರಂಪರೆಯ ಸಪ್ತಾಹದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ನಮ್ಮ ಊರು ನಮ್ಮ ನೆಲ ಎಂಬ ಶೀರ್ಷಿಕೆಯ ಕಲಾ ಪ್ರದರ್ಶನದ ಉದ್ಘಾಟನೆಯಾಯಿತು.
ತುಳುನಾಡು ಪ್ರದೇಶದ ಹತ್ತು ಕಲಾವಿದರ ವರ್ಣಚಿತ್ರಗಳು, ರೇಖಾಚಿತ್ರಗಳು ಮತ್ತು ಪ್ರತಿಷ್ಠಾಪನೆಗಳ ಪ್ರದರ್ಶನವನ್ನು ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಉದ್ಘಾಟಿಸಿದರು. ಹರೀಶ್ ಕೊಡಿಯಾಲ್ಬೈಲ್, ಜನಾರ್ದನ ಹಾವಂಜೆ, ಜೀವನ್ ಸಾಲಿಯಾನ್, ರೇಷ್ಮಾ ಎಸ್. ಶೆಟ್ಟಿ, ಸಂತೋಷ್ ಅಂದ್ರಾದೆ, ಸಂತೋಷ್ ಪೈ, ಶಿಲ್ಪಾ ಭಟ್, ಉಮೇಶ್ ವಿ.ಎಂ., ವಿಶ್ವಾಸ್ ಎಂ. ಮತ್ತು ವಿಲ್ಸನ್ ಡಿಸೋಜ ಮತ್ತಿತರ ಕಲಾವಿದರ ಕೃತಿಗಳು ಪ್ರದರ್ಶನದಲ್ಲಿ ಕಾಣಲಿವೆ.
ಇಂಟಾಕ್ ಸಂಚಾಲಕ ಸುಭಾಸ್ಚಂದ್ರ ಬಸು ಸ್ವಾಗತಿಸಿದರು. ರಾಜೇಂದ್ರ ಕೇದಿಗೆ ವಂದಿಸಿದರು.
Next Story





