ಲರ್ನ್ ದಿ ಕುರ್‌ಆನ್15ನೇ ಹಂತದ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟ

ಮಂಗಳೂರು, ಜು.24: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಇದರ ಅಧೀನ ಸಂಸ್ಥೆಗಳಾದ ಸಲಫಿ ಎಜುಕೇಶನ್ ಬೋರ್ಡ್, ಸಲಫಿ ಗರ್ಲ್ಸ್ ಮೂವ್ಮೆಂಟ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಮತ್ತು ಮುಜಾಹಿದ್ ಗರ್ಲ್ಸ್ ಮೂವ್ಮೆಂಟ್ ಕನ್ನಡ ಸೆಕ್ಷನ್ ರಿಯಾದ್ ಮತ್ತು ಎಸ್‌ಕೆಎಸ್‌ಎಂ ಯೂತ್ ವಿಂಗ್ ಇವುಗಳ ಜಂಟಿ ಆಶ್ರಯದಲ್ಲಿ ಜು.6ರಂದು ನಡೆದ 15ನೇ ಹಂತದ ಲರ್ನ್ ದಿ ಕುರ್‌ಆನ್ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.
ಕನ್ನಡ ವಿಭಾಗದಲ್ಲಿ ಪ್ರಥಮ ತಸ್ನೀಮ ದೇರಳಕಟ್ಟೆ ಮತ್ತು ರುಬೀನಾ ಪುತ್ತೂರು, ದ್ವಿತೀಯ ಮುಬಶೀರ ದೇರಳಕಟ್ಟೆ, ತೃತೀಯ ಶಹನಾಝ್ ಭಟ್ಕಳ್, ಮತ್ತು ನಿಶಾನ ಉಳ್ಳಾಲ.
ಇಂಗ್ಲಿಷ್ ವಿಭಾಗದಲ್ಲಿ ಆಶ್ಯಂ ಕುದ್ರೋಳಿ ಪ್ರಥಮ. ನಿಷ್ಮ ದೇರಳಕಟ್ಟೆ ದ್ವಿತೀಯ. ಆಝೀಝುರಹ್ಮಾನ್ ಕಾರ್ನಾಡ್ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಥಮ ಸ್ಥಾನ ಪಡೆದವರಿಗೆ ಉಚಿತ ಉಮ್ರಾ ಪ್ರಯಾಣ ಹಾಗೂ ದ್ವಿತೀಯ ಹಾಗೂ ತೃತೀಯ ವಿಜೇತ ರಿಗೆ ಚಿನ್ನದ ನಾಣ್ಯಗಳನ್ನು ಹಾಗೂ 11 ಮಂದಿಗೆ ಪ್ರೋತ್ಸಾಹ ಬಹುಮಾನ ಮತ್ತು 20 ಸೆಂಟರ್‌ಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು.
ನಂದಾವರದ ಉಸ್ಮಾನ್ ಬಿನ್ ಅಫ್ಫಾನ್ ಮಸೀದಿಯಲ್ಲಿ ನಡೆದ ಹಿಫ್ಝುಲ್ ಕುರ್‌ಆನ್ ಸ್ಪರ್ಧಾ ವಿಜೇತರಿಗೆ ಮತ್ತು ಲರ್ನ್ ದಿ ಕುರ್ ಆನ್ 15ನೇ ಹಂತದ ಪರೀಕ್ಷಾ ವಿಜೇತರಿಗೆ ಜು.27ರಂದು ನಗರದ ಪುರಭವನ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಈ ಕಾರ್ಯಕ್ರಮದಲ್ಲಿ 16ನೇ ಹಂತದ ಪುಸ್ತಕ ಬಿಡುಗಡೆ ಹಾಗೂ ಧಾರ್ಮಿಕ ಸಮಾವೇಶ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.







