ದ.ಕ. ಜಿಲ್ಲಾದ್ಯಂತ ಭಾರೀ ಮಳೆ: ಸೋಮವಾರ (ಮೇ 26) ಮದ್ರಸಗಳಿಗೆ ರಜೆ ಘೋಷಣೆ

ಸಾಂದರ್ಭಿಕ ಚಿತ್ರ
ಮಂಗಳೂರು: ಹವಾಮಾನ ಇಲಾಖೆಯು ಮೇ 26ರಂದು ರೆಡ್ ಅಲರ್ಟ್ ಘೋಷಿಸಿದೆ. ಮುಂಜಾಗ್ರತಾ ಕ್ರಮವಾಗಿ ದ.ಕ.ಜಿಲ್ಲಾ ಎಸ್ಕೆಜೆಎಂ ಮತ್ತು ಏಸ್ಕೆಎಂಎಂಎ ಮೇ 26ರ ಸೋಮವಾರ ಮದ್ರಸಗಳಿಗೆ ರಜೆಯನ್ನು ನೀಡಿರುವುದಾಗಿ ಪ್ರಕಟನೆ ತಿಳಿಸಿದೆ.
ದ.ಕ. ಜಿಲ್ಲೆಯಾದ್ಯಂತ ತೀವ್ರ ಮಳೆಯಾಗುತ್ತಿದ್ದು, ಗಾಳಿ ಕೂಡಾ ಬಲವಾಗಿ ಬೀಸುತ್ತಿವೆ. ಈ ನಿಟ್ಟಿನಲ್ಲಿ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಜಿಲ್ಲೆಯಲ್ಲಿರುವ ಎಲ್ಲ ಮದರಸಗಳ ಆಡಳಿತ ಮಂಡಳಿಗಳು ಹಾಗೂ ಸದರ್ ಉಸ್ತಾದರು ಮೇ 25 ಮತ್ತು 26ರಂದು ಮದ್ರಸಗಳಿಗೆ ರಜೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಸೂಚಿಸಿತ್ತು.
Next Story





