ಫಾದರ್ ಮುಲ್ಲರ್‌ನಲ್ಲಿ ಗ್ರಂಥಾಲಯ ದಿನಾಚರಣೆ

ಮಂಗಳೂರು, ಆ:23 ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ (ಎಫ್‌ಎಂಸಿಐ ) ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ದಶಮಾನೋತ್ಸವ ಸ್ಮಾರಕ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮಣಿಪಾಲದ ಕೆಂಎಂಸಿ ಆರೋಗ್ಯ ವಿಜ್ಞಾನ ಗ್ರಂಥಾಲಯದ ಅಸೋಸಿಯೇಟ್ ಪ್ರೊಫೆಸರ್ ಮತ್ತು ಉಪ ಮುಖ್ಯ ಗ್ರಂಥಪಾಲಕ ಡಾ. ಮಹಾಬಲೇಶ್ವರ ರಾವ್ ಅವರು ಮಾತನಾಡಿ ಆಧುನಿಕ ಗ್ರಂಥಾಲಯಗಳ ಹೊಸ ಹೊಸ ತಂತ್ರಜ್ಞಾನಗಳ ಅರಿವನ್ನು ಗ್ರಂಥಪಾಲಕರು ಹೊಂದಿರಬೇಕು ಎಂದರು.
ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸುವಲ್ಲಿ ಎಫ್‌ಎಂಸಿಐ ಗ್ರಂಥಾಲಯದ ಪ್ರಯತ್ನಗಳನ್ನು ಮತ್ತು ಕಾರ್ಯಕ್ರಮದ ವೃತ್ತಿಪರತೆ ಮತ್ತು ಗುಣಮಟ್ಟವನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಫ್‌ಎಂಸಿಐ ನಿರ್ದೇಶಕ ವಂ. ಫೌಸ್ಟಿನ್ ಲ್ಯೂಕಸ್ ಲೋಬೊ ಅವರು ಗ್ರಂಥಾಲಯಗಳು ಜ್ಞಾನ, ಚಿಂತನೆ ಮತ್ತು ಸ್ವ-ಅಭಿವೃದ್ಧಿಯ ಆಶ್ರಯ ತಾಣಗಳಾಗಿ ಬೆಳೆದಿವೆ . ತಾಂತ್ರಿಕ ಪ್ರಗತಿಯ ಹೊರತಾಗಿಯೂ, ಗ್ರಂಥಾಲಯಗಳು ವೈಯಕ್ತಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಅಗತ್ಯವಾದ ಸ್ಥಳಗಳಾಗಿ ಕಾರ್ಯನಿರ್ವಹಿಸುತ್ತಲೇ ಇವೆ - ಅಲ್ಲಿ ಓದುವುದು ಕೇವಲ ಕಲಿಕೆಯಲ್ಲ, ಆದರೆ ಹೆಚ್ಚು ಪ್ರಬುದ್ಧ ಸ್ವಯಂ ನಿರ್ಮಾಣದತ್ತ ಪ್ರಯಾಣವಾಗಿದೆ ಎಂದರು.
ಎಫ್ ಎಂಎಂಸಿ ಆಡಳಿತಾಧಿಕಾರಿ ವಂ.ಡಾ.ಮೈಕಲ್ ಸಂತುಮಯೋರ್,ಡೀನ್ ಡಾ.ಅಂತೋನಿ ಸಿಲ್ವನ್ ಡಿ ಸೋಜ ಉಪಸ್ಥಿತರಿದ್ದರು. ಗ್ರಂಥಾಲಯ ಸಮಿತಿಯ ಅಧ್ಯಕ್ಷ ಪ್ರೊ. ಡಾ. ಜಾನ್ ಜೆ.ಎಸ್ ಸ್ವಾಗತಿಸಿದರು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕಿ ಡಾ. ಜಾನೆಟ್ ಡಾಟಿ ಲೋಬೊ ಕ್ವಿಝ್‌ನಲ್ಲಿ ವಿಜೇತರ ಪಟ್ಟಿ ವಾಚಿಸಿದರು. ಫಾದರ್ ಮುಲ್ಲರ್ ಶಾಲೆ ಮತ್ತು ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಆಗ್ನೆಸ್ ವಂದಿಸಿದರು.
ಚರ್ಮರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಿಚೆಲ್ ಫೆರ್ನಾಂಡಿಸ್, ಅಸೋಸಿಯೇಟ್ ಪ್ರೊಫೆಸರ್ ಜನರಲ್ ಮೆಡಿಸಿನ್ ಡಾ. ಶ್ರೀ ಲಕ್ಷ್ಮೀ ಪ್ರಭು ,ಅಂತರ-ಕಾಲೇಜು ರಸಪ್ರಶ್ನೆ ಸ್ಪರ್ಧೆ, ’ಮುಲ್ಲರ್ ಲೈಬರ್ - 2025’ ನ್ನು ಪ್ರಾಧ್ಯಾಪಕ ಮತ್ತು ಮಕ್ಕಳ ಶಾಸ್ತ್ರದ ಮುಖ್ಯಸ್ಥ ಡಾ. ಅನಿಲ್ ಶೆಟ್ಟಿ ನಡೆಸಿಕೊಟ್ಟರು.
ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಅಂಗವಾಗಿ ರಸ ಪ್ರಶ್ನೆ ಸ್ಪರ್ಧೆ ಲಿಬೆರ್-2025 ನಡೆಯಿತು.ದ.ಕ ಹಾಗೂ ಉಡುಪಿಯ 30 ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.
‘ಮುಲ್ಲರ್ ಲೈಬರ್ - 2025’ ರಸಪ್ರಶ್ನೆ ಸ್ಪರ್ಧೆಯ ಫಲಿತಾಂಶ
ಪ್ರಥಮ : ಅನ್ಶಿಲ್ ಥಾಮಸ್ ರೆಜಿ, ಕ್ಲಾನ್ ಮೆರಿಲ್ ಸ್ಟೀವನ್ ರೇಗೊ
ಅನ್ವಿತ್ ಕೆ ಪಾಲಂಕರ್(ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು
ದ್ವಿತೀಯ: ಸಮಯ್ ಮಹೇಶ್ ತೆಲಂಗ್, ಶ್ರೀ ಸ್ವಸ್ತಿಕ್ ವಿ ಶೆಟ್ಟಿ, ಅಮಿತಾ ಅನಿಲ್ ಶೇಟ್(ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಮಣಿಪಾಲ್)
ಮೂರನೇ : ಕೀರಾ ಥೆರೆಸಾ ಡಿ ಸೋಜ ಇಶ್ರತ್ ಫಾತಿಮಾ ಅಬ್ಬಾಸಿ , ಆ್ಯಸ್ಟನ್ ಬ್ರಿಟ್ಟೊ( ಫಾದರ್ ಮುಲ್ಲರ್ ಕಾಲೇಜ್ ಆಫ್ ಫಿಸಿಯೋಥೆರಪಿ).
ಮೂರನೇ: ಚೇತನ ಪಿ , ಪ್ರಣವ್ ಎಂ , ಒಲಿವಿಯಾ ಪಾಲ್(ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು)
ನಾಲ್ಕನೇ : ನ್ಯೂಸಿ ಮುಖೇಶ್ ಜೈನ್, ರಿತು ಆರ್. ಪ್ರಭು, , ಗೋವಿಂದ್ ಎಸ್(ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ಫಿಸಿಯೋಥೆರಪಿ)
ಐದನೇ: ಆರನ್ ರೋಲ್ಫ್ ಡಿ ಸೋಜ, ರಂಸನ್ ಮೆಂಡೋನ್ಸಾ, ಅಮಲ್ ಲೂಯಿಸ್(ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್)







