ಮಧುರಾ ಕೆ ಅವರಿಗೆ ಪಿ ಎಚ್ ಡಿ ಪದವಿ

ಮಂಗಳೂರು : ಮಂಗಳೂರಿನ ಯೆನೆಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿಯ ಯನೆಪೋಯ ಹಣಕಾಸು ಮತ್ತು ಉದ್ಯಮಶೀಲತಾ ಅಭಿವೃದ್ಧಿ ಸಂಶೋಧನಾ ಕೇಂದ್ರ (ಯೆನ್-ರಿಫೈನ್ಡ್)ದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಮಧುರಾ ಕೆ ಅವರಿಗೆ, ಶ್ರೀನಿವಾಸ ವಿಶ್ವವಿದ್ಯಾಲಯದ 7ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಿ ಎಚ್ ಡಿ ಪದವಿ ಪ್ರದಾನ ಮಾಡಲಾಯಿತು.
"Social Media Effect on Online Buying Behavior of Fashion Products Among Working Women in Dakshina Kannada District of Karnataka" ಎಂಬ ವಿಷಯದಲ್ಲಿ ಅವರು ಸಂಶೋಧನೆಯನ್ನು ಡಾ. ನಿಯಾಝ್ ಪಣಕಜೆ ಮತ್ತು ಡಾ. ಅನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಮಧುರಾ ಕೆ ಅವರು ಪ್ರಾಥಮಿಕ ಶಿಕ್ಷಣವನ್ನು ನೆಲ್ಲಿಕಟ್ಟೆ ಮತ್ತು ಓಡಿಯೂರಿನಲ್ಲಿ ಪೂರೈಸಿ, ವಿವೇಕಾನಂದ ಪಿಯು ಮತ್ತು ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಬಳಿಕ, ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಎಂ.ಕಾಂ. ಪದವಿ ಪಡೆದಿದ್ದಾರೆ. ಅವರ ಈ ಸಾಧನೆಗೆ ಪತಿ ಶಶಾಂಕ್ ವಿ, ಪುತ್ರ ಸಮರ್ಥ್, ತಂದೆ ಶ್ಯಾಮ್ ಪ್ರಸಾದ್, ತಾಯಿ ವೈಜಯಂತಿ ಮಾಲಾ, ಮಾವ ವಿವೇಕಾನಂದ ಜೆ ಶಾಸ್ತ್ರಿ ಹಾಗೂ ಅತ್ತೆ ಪುಷ್ಪ ವಿ ಶಾಸ್ತ್ರಿ ಸಂತಸ ವ್ಯಕ್ತಪಡಿಸಿದ್ದಾರೆ.