ಮಾಡೂರು ಶಾಲಾ ಪ್ರಾರಂಭೋತ್ಸವ, ಆಂಗ್ಲ ಮಾಧ್ಯಮ ತರಗತಿ ಉದ್ಘಾಟನೆ

ಉಳ್ಳಾಲ: ದ.ಕ.ಜಿಂ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಡೂರಿನಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಆಂಗ್ಲ ಮಾಧ್ಯಮ ಶಿಕ್ಷಣದ ಎಲ್ ಕೆಜಿ,ಯುಕೆಜಿ ಮತ್ತು ಒಂದನೇ ತರಗತಿಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಸೋಮವಾರ ನಡೆಯಿತು.
ಕೊಠಡಿ ಗಳ ಉದ್ಘಾಟನೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಝೀಝ್ ಮಾಡೂರು, ರೋಟರಿ ಸಮುದಾಯದ ದಳ ಕೊಲ್ಯ ಇದರ ಅಧ್ಯಕ್ಷ ಸುಂದರ ಸುವರ್ಣ ನೆರವೇರಿಸಿದರು.
ಹರಿಶ್ಚಂದ್ರ ನಾಯ್ಗ ಮಾಡೂರು ಚೆಂಡೆ ವಾದನ ನಡೆಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಝೀಝ್ ಅಧ್ಯಕ್ಷತೆ ವಹಿಸಿದ್ದರು.ಕೌನ್ಸಿಲರ್ ಸುಜಿತ್ ಮಾಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮ ದಲ್ಲಿ ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ದಿವ್ಯ ಸತೀಶ್,ಉಪಾಧ್ಯಕ್ಷ ಪ್ರವೀಣ್, ಭಗವತಿ ದೇವಸ್ಥಾನ ಅರ್ಚಕ ಬಿಲ್ಮಣ್ಣ ಐತಾಳ್ ಚಂದ್ರ ಹಾಸ್ ಉಳ್ಳಾಲ,ಉದಯ ಕುಮಾರ್, ಭವನಿ, ಉದ್ಯಮಿ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಪುಷ್ಪಾ ಸ್ವಾಗತಿಸಿದರು