ಮಾಡೂರು ಶಾಲಾ ಕ್ರೀಡೋತ್ಸವ -2025 ಕಾರ್ಯಕ್ರಮಕ್ಕೆ ಚಾಲನೆ

ಉಳ್ಳಾಲ: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಮಾಡೂರು ಇದರ ಶಾಲಾ ಕ್ರೀಡೋತ್ಸವ 2025 ಕಾರ್ಯಕ್ರಮ ಮಾಡೂರು ಮೈದಾನದಲ್ಲಿ ನಡೆಯಿತು. ಪಾರಿವಾಳ ಹಾಗೂ ಬಲೂನ್ ನನ್ನು ಆಕಾಶಕ್ಕೆ ಹಾರಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು.
ತಲಪಾಡಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಮುಖ್ಯ ಅರ್ಚಕ ಗಣೇಶ್ ಭಟ್ ತಲಪಾಡಿ ದೀಪ ಪ್ರಜ್ವಲನೆ ಮಾಡಿದರು. ಮಂಗಳೂರು ದಕ್ಷಿಣ ವಲಯ ಶಿಕ್ಷಣ ಕೇಂದ್ರದ ಬಿಆರ್ ಪಿ ಸುಜಾತ ಸಂದರ್ಭೋಚಿತವಾಗಿ ಮಾತನಾಡಿದರು. ಕೋಟೆಕಾರ್ ಪ.ಪಂ.ಕೌನ್ಸಿಲರ್ ಸುಜಿತ್ ಮಾಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಭೂಮಾಪಕರ ಸಂಘದ ಅಧ್ಯಕ್ಷ ನಾಗರಾಜ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ವಿದ್ಯಾರ್ಥಿಗಳ ಸಾಮೂಹಿಕ ಪಥ ಸಂಚಲನ, ಅಂಗನವಾಡಿ ವಿದ್ಯಾರ್ಥಿಗಳ ಸಾಮೂಹಿಕ ಕವಾಯತು, ಎಲ್ ಕೆಜಿ ಯುಕೆ ಜಿ ವಿದ್ಯಾರ್ಥಿಗಳಿಂದ ನಲಿಕಲಿ , ಪ್ರಾಥಮಿಕ ವಿದ್ಯಾರ್ಥಿಗಳ ಸಾಮೂಹಿಕ ಕವಾಯತು, ನಡೆಯಿತು.
ಕಾರ್ಯಕ್ರಮ ದಲ್ಲಿ ಪದ್ಮಾವತಿ ಶೆಟ್ಟಿ, ಚಂದ್ರ ಹಾಸ್ ಉಳ್ಳಾಲ, ಮಾಜಿ ಕೌನ್ಸಿಲರ್ ಹಮೀದ್ ಹಸನ್ ಮಾಡೂರು, ಶಶಿಧರ ಪೂಂಜಾ, ಚಂದ್ರ ಶೇಖರ್ ಶೆಟ್ಟಿ, ಚಿದಾನಂದ ಮಡ್ಯಾರ್, ಕಿರಣ್, ಅಝೀಝ್ ಮಾಡೂರು, ಭಾಸ್ಕರ್ ಮಡ್ಯಾರ್ , ರಾಷ್ಟ್ರೋತ್ಥಾನ ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಕಿ ಮಾಲಾಶ್ರೀ, ಮಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾ ಯು.ಸ್ವಾಗತಿಸಿದರು. ಪುರುಷೋತ್ತಮ ಗಟ್ಟಿ ಕಾಚಾರ್ ನಿರೂಪಿಸಿದರು. ಶಿಕ್ಷಕಿ ಜೀವಿತ ವಂದಿಸಿದರು.







