ಉಳ್ಳಾಲ: ವ್ಯಕ್ತಿಯ ಮೇಲೆ ದಾಳಿ ನಡೆಸಿ ಅವರ ಸಾವಿಗೆ ಕಾರಣವಾದ ಬೀದಿನಾಯಿ ಸಾವು

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲ ಬೈಪಾಸ್ ಬಳಿ ದಯಾನಂದ ಗಟ್ಟಿ ಎಂಬವರ ಮೇಲೆ ದಾಳಿ ನಡೆಸಿ, ಆತನ ಸಾವಿಗೆ ಕಾರಣವಾದ ನಾಯಿ ಶನಿವಾರ ಸಾವಿಗೀಡಾಗಿದೆ.
ಕುಂಪಲ ಮೂರುಕಟ್ಟೆ ನಿವಾಸಿ ದಯಾನಂದ ಗಟ್ಟಿ ಅವರು ಶುಕ್ರವಾರ ಬೆಳಗ್ಗಿನ ಜಾವ ನಡೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೆ ನಾಯಿ ದಾಳಿ ನಡೆಸಿತ್ತು ಎನ್ನಲಾಗಿದೆ. ದಯಾನಂದ ಅವರ ಮೃತದೇಹ ವ್ಯಕ್ತಿಯೊಬ್ಬರ ಕುಂಪಲ ಬೈಪಾಸ್‌ನ ಮನೆಯ ಅಂಗಳದಲ್ಲಿ ಪತ್ತೆಯಾಗಿತ್ತು.
ದಯಾನಂದ ಅವರ ಸಾವಿಗೆ ನಾಯಿ ದಾಳಿ ಕಾರಣ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅನಂತರ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ದಯಾನಂದ ಅವರ ಸಾವು ಪ್ರಾಣಿ ದಾಳಿಯಿಂದ ಆಗಿದೆ ಎಂದು ದೃಢಪಡಿಸಿದ್ದರು.
ದಯಾನಂದ ಅವರ ಮೇಲೆ ದಾಳಿ ನಡೆಸಿದೆ ಎನ್ನಲಾದ ನಾಯಿಯನ್ನು ಶಕ್ತಿನಗರದ ಅನಿಮಲ್ ಕೇರ್ ಟ್ರಸ್ಟ್ ಸಹಾಯದಿಂದ ಹಿಡಿಯಲಾಗಿತ್ತು.
Next Story





