ಮಂಗಳೂರು: ಕಾರಿನಲ್ಲಿದ್ದ ಬ್ಯಾಗ್ ಕಳವು

ಮಂಗಳೂರು: ಬೇರೆ ಕಡೆಗೆ ಗಮನ ಸೆಳೆದು ಕಾರಿನಲ್ಲಿದ್ದ ಬ್ಯಾಗ್ ಕಳವು ಮಾಡಿದ ಘಟನೆಯು ನಗರದ ಪಿವಿಎಸ್ ವೃತ್ತದ ಬಳಿ ಸೋಮವಾರ ನಡೆದಿರುವುದಾಗಿ ಕದ್ರಿ ಪೊಲೀಸರು ತಿಳಿಸಿದ್ದಾರೆ.
ಡಾ.ರೀತಾ ಕುಮಾರಿ ಎಂಬವರು ಸೋಮವಾರ ಬೆಳಗ್ಗೆ 10.30ಕ್ಕೆ ನಗರದ ಪಿವಿಎಸ್ ಬಳಿಯ ಲಕ್ಷ್ಮೀನಾರಾಯಣ ದೇವಸ್ಥಾನದ ಗೇಟಿನ ಮುಂದೆ ಕಾರು ನಿಲ್ಲಿಸಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಆಗಮಿಸಿ 10 ರೂ. ನೋಟನ್ನು ಕಾರಿನ ಎಡಭಾಗದಲ್ಲಿ ಹಾಕಿ ‘ನಿಮ್ಮ ಹಣ ಬಿದ್ದಿದೆ’ ಎಂದು ಹೇಳಿದ್ದ ಎನ್ನಲಾಗಿದೆ. ಅದರಂತೆ ಮಹಿಳೆ ಅದನ್ನು ಹೆಕ್ಕುತ್ತಿದ್ದಾಗ ಅಪರಿಚಿತ ವ್ಯಕ್ತಿ ಕಾರಿನ ಬಲಬದಿಯಲ್ಲಿಯೂ ನೋಟು ಇರುವುದಾಗಿ ತಿಳಿಸಿ ಮಹಿಳೆಯು ಅತ್ತ ಕಡೆ ಹೋಗಲು ಮುಂದಾದಾಗ ಮತ್ತೋರ್ವ ಅಪರಿಚಿತನು ಕಾರಿನ ಎಡಭಾಗದಲ್ಲಿದ್ದ 20000 ರೂ. ನಗದು, ಕ್ರೆಡಿಟ್ ಕಾರ್ಡ್, ಬೀಗದ ಕೀ ಮತ್ತು ಇತರ ದಾಖಲೆಗಳಿದ್ದ ಬ್ಯಾಗ್ ಕಳವು ಮಾಡಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಕದ್ರಿ ಪೊಲೀಸರು ತಿಳಿಸಿದ್ದಾರೆ.
Next Story