ಮಂಗಳೂರು: ಅಭಿಷೇಕ್. ಆರ್ ಅವರಿಗೆ ಪಿಎಚ್‌ಡಿ ಪದವಿ

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಸಾಗರ ಭೂವಿಜ್ಞಾನ ವಿಭಾಗದಲ್ಲಿ ಸಂಶೋಧಕರಾದ ಅಭಿಷೇಕ್ ಆರ್ ಅವರು "ಇಂಪ್ಯಾಕ್ಟ್ ಆಫ್ ಅರ್ಬನ್ ಹೀಟ್ ಐಲ್ಯಾಂಡ್ ಇನ್ ಆಂಡ್ ಅರೌಂಡ್ ಮಂಗಳೂರು, ಕರ್ನಾಟಕ, ಇಂಡಿಯಾ ಯೂಸಿಂಗ್ ಜೀಯೋಸ್ಪೆಶಿಯಲ್ ಟೆಕ್ನಿಕ್ಸ್" ಎಂಬ ವಿಷಯದಲ್ಲಿ ಮಂಗಳೂರು ವಿವಿಗೆ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿ ನೀಡಿದೆ.
ಸಾಗರ ಭೂವಿಜ್ಞಾನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಚ್ .ಗಂಗಾಧರ ಭಟ್ ಅವರು ಮಾರ್ಗದರ್ಶನ ನೀಡಿದ್ದರು. ಅಭಿಷೇಕ್ ಆರ್ ಅವರು ಮಂಗಳೂರು ವಿವಿಯ ರಸಾಯನ ಶಾಸ್ತ್ರ ವಿಭಾಗದ ನಿವೃತ್ತ ಉದ್ಯೋಗಿ ರಾಜೇಂದ್ರನ್ ಹಾಗೂ ಕಲೈಸೆಲ್ವಿ ಅವರ ಪುತ್ರರಾಗಿದ್ದಾರೆ.
Next Story





