ಮಂಗಳೂರು | ಅಥೆನಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಆರ್.ಎಸ್. ಶೆಟ್ಟಿಯನ್ ನಿಧನ

ಮಂಗಳೂರು, ನ.22: ನಗರದ ಅಥೆನಾ ಆಸ್ಪತ್ರೆ ಮತ್ತು ಅಥೆನಾ ಶಿಕ್ಷಣ ಸಮೂಹದ ಆಡಳಿತ ನಿರ್ದೇಶಕ ಹಾಗೂ ಅಧ್ಯಕ್ಷ ಆರ್.ಎಸ್. ಶೆಟ್ಟಿಯನ್ (65) ಶುಕ್ರವಾರ ನಿಧನರಾಗಿದ್ದಾರೆ.
ಖಾಸಗಿ ಮತ್ತು ಆದಾಯೇತರ ಕ್ಷೇತ್ರಗಳಲ್ಲಿ ವಿವಿಧ ನಾಯಕತ್ವ ಪಾತ್ರಗಳನ್ನು ನಿರ್ವಹಿಸಿದ್ದ ಅವರು, ಭಾರತೀಯ ವೈಎಂಸಿಎ (ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಶನ್)ನ ರಾಷ್ಟ್ರೀಯ ಕೋಶಾಧಿಕಾರಿ ಹಾಗೂ ಟ್ರಸ್ಟಿಯಾಗಿ ಆಯ್ಕೆಯಾಗಿದ್ದರು. 158 ವರ್ಷಗಳ ಇತಿಹಾಸ ಹೊಂದಿರುವ ವೈಎಂಸಿಎಯ ಕೋಶಾಧಿಕಾರಿಯಾಗಿ ಆಯ್ಕೆಯಾದ ಕರ್ನಾಟಕದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ಮಾತ್ರವಲ್ಲದೆ ಅವರು ಬಲ್ಮಠದ ಸಿಎಸ್ಐ ಶಾಂತಿ ಕೆಥಡ್ರಾಲ್ ನ ಸದಸ್ಯರೂ ಆಗಿದ್ದರು.
ಮೃತರು ಪತ್ನಿ, ಮಕ್ಕಳು ಹಾಗೂ ಮೊಕ್ಕಳ ಜತೆಗೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸ್ಪೀಕರ್ ಸಂತಾಪ
ಮಂಗಳೂರಿನ ಅಥೆನಾ ಆಸ್ಪತ್ರೆಯ ಚೆಯರ್ ಮ್ಯಾನ್ ಆರ್.ಎಸ್. ಶೆಟ್ಟಿಯನ್ ಅವರ ನಿಧನ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬಸ್ಥರು ಹಾಗೂ ಹಿತೈಷಿಗಳಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ.







