ಮಂಗಳೂರು: ಭೀಮ ನೂತನ ಆಭರಣ ಮಳಿಗೆ ಉದ್ಘಾಟನೆ

ಮಂಗಳೂರು, ಜೂ.11: ಹೆಸರಾಂತ ಆಭರಣ ಮಳಿಗೆ 'ಭೀಮ'ದ ನೂತನ ಬೃಹತ್ ಶೋರಂ ಬುಧವಾರ ಮಂಗಳೂರಿನಲ್ಲಿ ಶುಭಾರಂಭಗೊಂಡಿತು.
ನಗರದ ಲೊವರ್ ಬೆಂದೋರ್ ಜಂಕ್ಷನ್ ನಲ್ಲಿರುವ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಭೀಮ ಆಭರಣ ಸಂಸ್ಥೆ ಸಮಾಜಕ್ಕೆ ಕೊಡುಗೆಗಳನ್ನು ನೀಡುತ್ತಾ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ನೂತನ ಮಳಿಗೆಯನ್ನು ಉದ್ಘಾಟಿಸಿದ ಭೀಮ ಗೋಲ್ಡ್ ಪ್ರೈ. ಲಿ.ನ ವ್ಯವಸ್ಥಾಪಕ ನಿರ್ದೇಶಕ ವಿಷ್ಣು ಶರಣ್ ಭಟ್ ಮಾತನಾಡಿ, ಮಂಗಳೂರಿನಲ್ಲಿ ಬೃಹತ್ ಚಿನ್ನ, ಬೆಳ್ಳಿ, ವಜ್ರ ಹಾಗೂ ಬ್ರ್ಯಾಂಡೆಡ್ ವಾಚ್ ಗಳ ಬೃಹತ್ ಪ್ರದರ್ಶನ ಮಳಿಗೆಗಳು, ಸಂಗ್ರಹವನ್ನು ಗ್ರಾಹಕರಿಗೆ ಒಂದೇ ಸೂರಿನಡಿ ಒದಗಿಸಲು ಸಂತೋಷವಾಗುತ್ತಿದೆ. ನೂತನ ಮಳಿಗೆ ಉದ್ಘಾಟನೆ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕಿ ಸಾವಿತ್ರಿ ಕೃಷ್ಣನ್ ದೀಪ ಬೆಳಗಿಸಿ ಮಳಿಗೆಗೆ ಚಾಲನೆ ನೀಡಿದರು.
ಜೂ.22ರವರೆಗೆ ವಿಶೇಷ ಕೊಡುಗೆ
ದಿವಂಗತ ಬಿ. ಕೃಷ್ಣನ್ ರವರ ಮೂಲಕ ಸ್ಥಾಪಿತವಾದ ಭೀಮ ಆಭರಣ ಸಂಸ್ಥೆಯು ಮಂಗಳೂರಿನಲ್ಲಿ ಅತಿದೊಡ್ಡ ಆಭರಣ ಮಳಿಗೆಯನ್ನು ಬುಧವಾರ ಅನಾವರಣಗೊಳಿಸಿದೆ. ಗ್ರಾಹಕರಿಗೆ ವಿಶೇಷವಾದ ಶಾಪಿಂಗ್ ಅನುಭವದ ಜೊತೆ ನೂತನ ಮಳಿಗೆಯ ಉದ್ಘಾಟನೆಯ ಸಂಭ್ರಮವನ್ನು ಇನ್ನಷ್ಟು ಸ್ಮರಣೀಯವಾಗಿಸಲು ವಿಶೇಷ ಕೊಡುಗೆ ಮತ್ತು ಸೊಗಸಾದ ಉಡುಗೊರೆಗಳನ್ನು ನೀಡಲಾಗುತ್ತಿದೆ.
ಜೂನ್ 11ರಿಂದ 22ರವರೆಗೆ ಪ್ರತಿ 8 ಗ್ರಾಂ ಚಿನ್ನದ ಖರೀದಿಸುವ ಗ್ರಾಹಕರು 4 ಸಾವಿರ ರೂಪಾಯಿ ರಿಯಾಯಿತಿ, 80 ಸಾವಿರ ರೂ. ಮೌಲ್ಯದ ವಜ್ರ ಖರೀದಿಸುವ ಗ್ರಾಹಕರಿಗೆ 12 ಸಾವಿರ ರೂ. ರಿಯಾಯಿತಿ, ಪ್ರತೀ ಕೆ.ಜಿ ಬೆಳ್ಳಿ ಖರೀದಿಸುವ ಗ್ರಾಹಕರಿಗೆ 5 ಸಾವಿರ ರೂಪಾಯಿ ರಿಯಾಯಿತಿ ಹಾಗೂ ಹಳೆಯ ಚಿನ್ನದ ವಿನಿಮಯದ ಸಂದರ್ಭದಲ್ಲಿ ಪ್ರತೀ ಗ್ರಾಂಗೆ ಹೆಚ್ಚುವರಿಯಾಗಿ ರೂ.100 ಗ್ರಾಹಕರು ಪಡೆಯಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಇದಲ್ಲದೆ ಪ್ರತೀ ಎರಡು ಗಂಟೆಗೆ ನಡೆಯುವ ಲಕ್ಕಿ ಡ್ರಾದಲ್ಲಿ ಗ್ರಾಹಕರಿಗೆ ಆಕರ್ಷಕ ಬಹುಮಾನ ಪಡೆಯುವ ಅವಕಾಶವಿದೆ. ಬಂಪರ್ ಬಹುಮಾನ ಮಹೀಂದ್ರಾ ಥಾರ್ ವಾಹನವನ್ನು ಲಕ್ಕಿ ಕೂಪನ್ ಮೂಲಕ ಪಡೆಯಬಹುದು. ಇದಲ್ಲದೆ ಗ್ರಾಹಕರಿಗೆ ಚಿನ್ನಾಭರಣ ಪಡೆಯಲು ವಿಶೇಷ ಯೋಜನೆಗಳನ್ನು ಭೀಮ ನೀಡುತ್ತಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.
ಡಾ.ಪ್ರತಿಮಾ ಸುರೇಶ್ ಮೊದಲ ಗ್ರಾಹಕರಾಗಿ ಬುಧವಾರ ಆಭರಣ ಖರೀದಿಸಿದರು. ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು. ವ್ಯವಸ್ಥಾಪಕ ನಿರ್ದೇಶಕ ವಿಷ್ಣು ಶರಣ್ ಭಟ್ ಕುಟುಂಬದ ಸದಸ್ಯರು ಗ್ರಾಹಕರನ್ನು ಸ್ವಾಗತಿಸಿದರು.







