ಮಂಗಳೂರು: ಸೈಯದ್ ಅಹ್ಮದ್ ಬಾಷಾ ತಂಙಳ್ ಅನುಸ್ಮರಣೆ ಕಾರ್ಯಕ್ರಮ

ಮಂಗಳೂರು, ನ.15: ಇತ್ತೀಚೆಗೆ ನಿಧನರಾದ ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಅಲ್ಹಾಜ್ ಸೈಯದ್ ಅಹ್ಮದ್ ಬಾಷಾ ತಂಙಳ್ ರವರ ಅನುಸ್ಮರಣೆ ಸಭೆಯು ಸಂಸ್ಥೆಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.
ಜಾಮಿಯಾ ಮಸೀದಿಯ ಉಸ್ತಾದ್ ಝುಬೈರ್ ಮೌಲಾನ ಅವರ ಮಗ್ಫಿರತ್ ಗಾಗಿ ದುಆ ನೆರವೇರಿಸಿದರು.
ಕಮಿಟಿಯ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಕೆ.ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಡಿ.ಎಂ.ಅಸ್ಲಂ, ಹಾಜಿ ಬಿ.ಅಬೂಬಕರ್, ಹಾಜಿ ಅಬ್ದುಲ್ ಮಜೀದ್ ಸಿತಾರ್, ನ್ಯಾಯವಾದಿ ಸುಲೈಮಾನ್ ಮೊದಲಾದವರು ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಮಿಟಿಯ ಉಪಾಧ್ಯಕ್ಷ ಹಾಜಿ ಸಿ.ಮಹಮೂದ್, ಕಾರ್ಯದರ್ಶಿಗಳಾದ ಹಾಜಿ ಮೊಯ್ದಿನ್ ಮೋನು, ಹಾಜಿ ರಿಯಾಝುದ್ದೀನ್, ಡಾ.ಮುಹಮ್ಮದ್ ಆರಿಫ್ ಮಸೂದ್, ಹಾಜಿ ಮಕ್ಬೂಲ್ ಅಹ್ಮದ್, ಎಂ.ಎ.ಅಶ್ರಫ್, ಎನ್.ಕೆ. ಅಬೂಬಕರ್, ಅದ್ದು ಹಾಜಿ, ಆಬೀದ್ ಜಲಿಹಾಲ್, ಮುಹಮ್ಮದ್ ಸಲೀಂ ಮನ್ನತ್, ಶಂಸುದ್ದೀನ್ ಕಂಡತ್ ಪಳ್ಳಿ, ಮೊದಲಾದವರು ಉಪಸ್ಥಿತರಿದ್ದರು.





