ಮಂಗಳೂರು: ಮಂಗಳಮುಖಿಯರ ವಿರುದ್ಧ ದೂರು

ಮಂಗಳೂರು, ಆ.2: ಕಾರು ನಿಲ್ಲಿಸಿದ್ದಲ್ಲದೆ ಚಾಕು ತೋರಿಸಿ ಹಣ ಸುಲಿಗೆ ಮಾಡಿರುವ ಬಗ್ಗೆ ಮಂಗಳಮುಖಿಯರ ವಿರುದ್ಧ ನಗರದ ಉರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.
ಜು.9ರಂದು ರಾತ್ರಿ 11:30ಕ್ಕೆ ವ್ಯಕ್ತಿಯೊಬ್ಬರು ಕಾರಿನಲ್ಲಿ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಜಂಕ್ಷನ್‌ನಿಂದ ಸ್ವಲ್ಪ ಮುಂದೆ ಮಂಗಳಮುಖಿ ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದು, ಅದರಂತೆ ತಾನು ಕಾರನ್ನು ನಿಲ್ಲಿಸಿ ಮಂಗಳಮುಖಿಯ ಬಳಿ ಹೋದಾಗ ಪೊದೆಯಲ್ಲಿ ಅವಿತು ಕುಳಿತಿದ್ದ ಇತರ ಮೂವರು ಮಂಗಳಮುಖಿಯರು ಚಾಕು ತೋರಿಸಿ ಬೆದರಿಸಿ ಕಿಸೆಯಲ್ಲಿದ್ದ ಸುಮಾರು 4,500 ರೂ. ನಗದು ಹಾಗೂ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿದ್ದ ವ್ಯವಹಾರದ ಸುಮಾರು 1.75 ಲಕ್ಷ ರೂ. ನಗದನ್ನು ಸುಲಿಗೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸುಲಿಗೆ ಮಾಡಿದ ವಿಚಾರವನ್ನು ಯಾರಿಗಾದರೂ ಹೇಳಿದರೆ ಮಾನಹಾನಿ ಮಾಡುವುದಾಗಿ ಬೆದರಿಸಿ ಸಮೀಪದಲ್ಲಿ ನಿಲ್ಲಿಸಿದ ಕಾರಿನಲ್ಲಿ ಕೊಟ್ಟಾರ ಕಡೆಗೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story