Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಸೆ. 22ರಿಂದ ಮಂಗಳೂರು ದಸರಾ ಉತ್ಸವ

ಸೆ. 22ರಿಂದ ಮಂಗಳೂರು ದಸರಾ ಉತ್ಸವ

ವಾರ್ತಾಭಾರತಿವಾರ್ತಾಭಾರತಿ25 Aug 2025 7:30 PM IST
share
ಸೆ. 22ರಿಂದ ಮಂಗಳೂರು ದಸರಾ ಉತ್ಸವ

ಮಂಗಳೂರು: ಮಂಗಳೂರು ದಸರಾ 2025 ಸೆ.22ರಿಂದ ಅ.2 ರವರೆಗೆ ಕುದ್ರೋಳಿಯಲ್ಲಿ ನಡೆಯಲಿದೆ ಎಂದು ದಸರಾ ಉತ್ಸವ ಸಮಿತಿಯ ಸಂಘಟಕರಾದ ಪದ್ಮರಾಜ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವರಾದ ಶ್ರೀ ಬಿ.ಜನಾರ್ದನ ಪೂಜಾರಿ ಅವರ ಮಾರ್ಗ ದರ್ಶನದಲ್ಲಿ ಕ್ಷೇತ್ರಾಡಳಿತ ಸಮಿತಿ, ಅಭಿವೃದ್ಧಿ ಸಮಿತಿ ಜೊತೆಗೂಡಿಕೊಂಡು 1991ರಿಂದ ದಸರಾ ಯಾವಾಗಲೂ ಸಾಮಾಜಿಕ ಬದಲಾವಣೆಯ ದಾರಿ ಆಗಿ ಬೆಳೆದಿದೆ. ಗಣಪತಿ, ಆದಿಶಕ್ತಿ ಸಹಿತವಾಗಿ ಶಾರದ ಮಾತೆ, ನವದುರ್ಗೆ ಯರ ಪ್ರತಿಷ್ಠಾಪ ನೆಯೊಂದಿಗೆ ಎಲ್ಲಾ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳು, ಗಣಹೋಮ, ಚಂಡಿಕಾ ಯಾಗ ಹೋಮಹವನ ಗಳು ನಡೆಯಲಿದ್ದು ಸಕಲ ಸಿದ್ಧತೆಗಳನ್ನ ನಡೆಸಲಾಗಿದೆ.

ಈ ಬಾರಿ ಪ್ರತಿದಿನ ಮೂರು ತಂಡಗಳಿಗೆ ಕಲಾಪ್ರದರ್ಶನದ ಅವಕಾಶ ಕಲ್ಪಿಸಲಾಗಿದ್ದು, ಕಾರ್ಯಕ್ರಮದ ಗುಣಮಟ್ಟ ವನ್ನು ಖಾಯ್ದುಕೊಳ್ಳುವ ನಿಟ್ಟಿನಲ್ಲಿ ಬಂದಿರುವ ಮನವಿ ಪತ್ರಗಳನ್ನು ಪರಿಶೀಲಿಸಿ ಅವರ ಪ್ರದರ್ಶನದ ವೀಡಿಯೋ ಗಳನ್ನು ಪರಿಶೀಲಿಸಿ ಆಯ್ಕೆಮಾಡಲಾಗಿದೆ ಹಾಗೂ ಕಳೆದ ವರ್ಷಗಳ ಅವಧಿಯೊಳಗಡೆ ಕಲಾಪ್ರದರ್ಶನ ನೀಡಿದವ ರನ್ನು ಹೊರತುಪಡಿಸಿ ಹೊಸ ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟಾರೆ 31 ತಂಡಗಳು, 700-800 ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ.

ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಕಲಾವಿದರ ತಂಡಗಳು ಆಗಮಿಸುತ್ತಿದ್ದು, ಭರತನಾಟ್ಯ, ವೀಣಾ ವಾದನ ಜಾನಪದ ಕಲಾಪ್ರಕಾರಗಳು, ಹರಿಕಥೆ, ತಾಳಮದ್ದಳೆ, ಯಕ್ಷಗಾನ, ಯಕ್ಷಗಾನ ನಾಟ್ಯ ಪುಂಡು ವೇಶ ವೈಭವ, ನೃತ್ಯ ರೂಪಕ, ಜಾದು ಪ್ರದರ್ಶನ, ಆಳ್ವಾಸ್ ಸಾಂಸ್ಕೃತಿಕ ವೈಭವ, ಎಸ್.ಡಿ.ಎಮ್ ಕಲಾ ವೈಭವಹೀಗೆ ಪ್ರೇಕ್ಷಕರಿಗೆ ಭಕ್ತಿಯಿಂದ ಮನರಂಜನೆವರೆಗಿನ ಸಂಪೂರ್ಣ ಅನುಭವವನ್ನು ನೀಡುವ ಉದ್ದೇಶದಿಂದ ವಿವಿಧ ಬಗೆಯ ಕಲಾ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ಸಾಧನೆ, ಸೇವೆಯ ಮುಖೇನ ಬದುಕಿಗೆ ಆಶಾಕಿರಣವಾಗಿ ನಿಲ್ಲುವ, ಇನ್ನು ಎಲೆಮರೆಯ ಕಾಯಿಯಾಗಿ,ಮುಖ್ಯ ಭೂಮಿಕೆಗೆ ಬರದೆ ಸೇವೆಯೆ ಪರಮ ಗುರಿಯೆಂದು ಕರ್ತವ್ಯ ನಿರ್ವಹಿಸುತ್ತಿರೋ ಸಾಧಕರನ್ನ ಈ ಸಂಧರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಿದ್ದೆವೆ. ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳನ್ನೂ ಕೂಡ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಮಂಗಳೂರು ದಸರಾ ಸದಾ ಪ್ರತಿಭೆಯನ್ನು ಬೆಳೆಸುವ, ಉತ್ತೇಜಿಸುವ ನಿಲುವನ್ನು ಕಾಯ್ದುಕೊಂಡಿದೆ. ಈ ಬಾರಿ ಅನೇಕ ಸ್ಪರ್ಧೆಗಳು ಕಲಾವಿದರಿಗೂ, ಮಕ್ಕಳಿಗೂ, ಸಾಹಿತ್ಯ ಪ್ರೇಮಿಗಳಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿದೆ.

ದಸರಾ ರುದ್ರವೀಣಾ ಭಕ್ತಿಪ್ರಧಾನ ನೃತ್ಯ ಸ್ಪರ್ಧೆ ಯನ್ನ ಏರ್ಪಡಿಸಿದ್ದುವಿಜೇತರಿಗೆ ಒಟ್ಟು 1 ಲಕ್ಷದ ಭವ್ಯ ಬಹುಮಾನ ಸಿಗಲಿದೆ.

ಸಾಹಿತ್ಯ ಪ್ರೇಮಿಗಳಿಗಾಗಿ ಮಂಗಳೂರು ದಸರಾ ಬಹುಭಾಷಾ ಕವಿಗೋಷ್ಠಿ ಮತ್ತು ತುಳು ಮತ್ತು ಕನ್ನಡ ಕವನ ಸ್ಪರ್ಧೆ ವಿಶೇಷ ಆಕರ್ಷಣೆ ಯಾಗಿ ಮಕ್ಕಳ ದಸರಾ- ಮಕ್ಕಳಿಗಾಗಿಯೇ ವಿಶೇಷವಾಗಿ ಒಂದು ದಿನದ ಕಾರ್ಯಕ್ರಮ ಸ್ಪರ್ಧೆಗಳ ಆಯೋಜನೆಯಾಗಿದ್ದು ದಿನಪೂರ ಮಕ್ಕಳ ಸಂಭ್ರಮ ದಸರಾದಲ್ಲಿ ಮೂಡಿಬರಲಿದೆ.

ಕಿನ್ನಿಪಿಲಿ ಸ್ಪರ್ಧೆ - ದಸರಾಕ್ಕೆ ಹುಲಿ ವೇಷವೇ ಭೂಷಣವಾಗಿರುವಾಗ ಪ್ರಪ್ರಥಮ ಬಾರಿಗೆ ವಿಶೇಷವಾಗಿ ಮಕ್ಕಳಿಗೆ ಕಿನ್ನಿಪಿಲಿ ಸ್ಪರ್ಧೆ ಆಯೋಜಿಸಿದ್ದು 4ವರ್ಷ ಒಳಗಿನ ಮತ್ತು 4-8ವರ್ಷದ ಮಕ್ಕಳಿಗೆ ಎರಡು ವಿಭಾಗದಲ್ಲಿ ನಡೆಯಲಿದೆ, ಆಕರ್ಷಕ ನಗದು ಬಹುಮಾನ ನೀಡಲಿದ್ದೆವೆ.ಜೊತೆಗೆ ಇತರ ಪ್ರತಿಭೆಗಳಿಗಾಗಿ ಭಕ್ತಿಗೀತೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮುದ್ದು ಶಾರದೆ ಸ್ಪರ್ಧೆಈ ಸ್ಪರ್ಧೆಗಳ ಮೂಲಕ ಬಾಲ ಪ್ರತಿಭೆಗಳು, ಯುವ ಪ್ರತಿಭೆಗಳು ಮತ್ತು ಹಿರಿಯ ಕಲಾವಿದರು ಎಲ್ಲರಿಗೂ ವೇದಿಕೆ ಸಿಗಲಿದೆ ಎಂದು ಆರ್ .ಪದ್ಮರಾಜ್ ವಿವರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಎಚ್ ಎಸ್ ಜಯ ರಾಜ್, ದೇವೇಂದ್ರ ಪೂಜಾರಿ, ಮಾಧವ ಸುವರ್ಣ, ಡಾ.ಬಿ.ಜಿ.ಸುವರ್ಣ, ಕೃತಿನ್ ಬಿ ಅಮೀನ್ ಮೊದಲಾದವರು ಉಪಸ್ಥಿತ ರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X