ಮಂಗಳೂರು: ಎಜು-ಎಕ್ಸ್ ಕಾನ್ಫರೆನ್ಸ್

ಮಂಗಳೂರು: ಐ.ಎ.ಎಂ.ಇ ಯ ಪ್ಯಾನ್ ಇಂಡಿಯಾ ಯೋಜನೆಯ ಭಾಗವಾಗಿ, ಎಜುಫೈ ಪಬ್ಲಿಕೇಷನ್ಸ್ ಕಾನ್ಫರೆನ್ಸ್ ಮಂಗಳೂರಿನ ಗ್ರಾಂಡ್ ಎ.ಜೆ ಹೋಟೆಲ್ ನಲ್ಲಿನಡೆಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಸವಾಲುಗಳು ಮತ್ತು ಪರಿಹಾರ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಾಯಿತು. ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ ಉದ್ಘಾಟಿಸಿದರು.
ಎಜುಫೈ ಪಬ್ಲಿಕೇಷನ್ಸ್ ನಿರ್ದೇಶಕ ಅಫ್ಜಲ್ ಕೋಳಾರಿ ಅಧ್ಯಕ್ಷತೆ ವಹಿಸಿದ್ದರು. ಡಾ.ಅಮೀರ್ ಹಸನ್ ಆಸ್ಟ್ರೇಲಿಯಾ, ಮಸೂದ್ ಮಂಗಳೂರು, ವಂದನಾ ರಾವ್, ಪಿ.ಸಿ.ಅಬ್ದುರ್ ರೆಹಮಾನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಮುಸ್ತಫಾ ಸಅದಿ, ರಮ್ಜಿ ಮೊಹಮ್ಮದ್, ಮೊಹಮ್ಮದ್ ಮನಾಝಿರ್ ಮುಡಿಪು, ಸಿ.ಎಂ. ನೌಶಾದ್, ಸಿ.ಟಿ. ಮೊಹಮ್ಮದ್ ಅಲಿ ಶುಭ ಹಾರೈಸಿದರು.
ದ.ಕ ಜಿಲ್ಲೆಯ ವಿವಿಧ ಶಾಲೆಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಮತ್ತು ಪ್ರಾಂಶುಪಾಲರು ಭಾಗವಹಿಸಿದ್ದರು. ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿವಿಧ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಜುಫೈ ಪಬ್ಲಿಕೇಷನ್ಸ್ ಕನ್ನಡ ಭಾಷೆಯಲ್ಲಿ ಪ್ರಕಟಿಸಿದ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಶಾಲೆಗಳನ್ನು ವಿದ್ಯಾರ್ಥಿ ಸ್ನೇಹಿ ಮತ್ತು ಉತ್ತಮ ಗುಣಮಟ್ಟದ ಕೇಂದ್ರಗಳನ್ನಾಗಿ ಮಾಡಲು ವಿವಿಧ ಕ್ರಿಯಾ ಯೋಜನೆಗಳನ್ನು ಅನುಮೋದಿಸಲಾಯಿತು.







