ಮಂಗಳೂರು: ʼಮೀಫ್ʼ ವ್ಯವಸ್ಥಾಪಕಗೆ ಬೀಳ್ಕೊಡುಗೆ

ಮಂಗಳೂರು: ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ದ.ಕ ಮತ್ತು ಉಡುಪಿ ಜಿಲ್ಲೆ)ದ ಕಚೇರಿಯಲ್ಲಿ ಮ್ಯಾನೇಜರ್ ಆಗಿದ್ದ ಮುಹಮ್ಮದ್ ಸವಾದ್ ತನ್ನ ಹುದ್ದೆಯಿಂದ ಬಿಡುಗಡೆಗೊಂಡ ಹಿನ್ನಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಬುಧವಾರ ಕಚೇರಿಯಲ್ಲಿ ಜರುಗಿತು.
ಮುಹಮ್ಮದ್ ಸವಾದ್ ಅವರನ್ನು ಮೀಫ್ ಗೌರವಾಧ್ಯಕ್ಷ ಉಮರ್ ಟೀಕೆ ಸನ್ಮಾನಿಸಿ ಶ್ಲಾಘಿಸಿದರು. ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಶುಭ ಹಾರೈಸಿದರು. ಈ ಸಂದರ್ಭ ಮೀಫ್ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
Next Story





