ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ಸಂಸ್ಥಾಪನಾ ದಿನ

ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹಾಗೂ ನಿಷ್ಠಾವಂತ ಹೋರಾಟ ನಡೆಸಿ ಒಂದು ದಶಕವನ್ನು ಪೂರ್ಣಗೊಳಿಸಿದೆ.
ವಿಮೆನ್ ಇಂಡಿಯಾ ಮೂವ್ಮೆಂಟ್ ನ 10 ನೆಯ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಇಂದು ಮೂಡುಬಿದಿರೆ ಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ತನ್ಹ ಕ್ಲಿನಿಕ್ ನ ಡಾ. ಆಯಿಷ ತಹ್ನೀನ ಉಪಸ್ಥಿತರಿದ್ದರು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿದ ನಸೀಮ ಸಿದ್ದಕಟ್ಟೆ ಯವರು ವಿಮೆನ್ ಇಂಡಿಯಾ ಮೂವ್ಮೆಂಟ್ ನಿಂದ ಮಹಿಳೆಯರು ಸಮಾಜದಲ್ಲಿ ಯಾವ ರೀತಿ ನಾಯಕತ್ವವನ್ನು ಹೊಂದಿರುವ ಬಗ್ಗೆ, ಹಾಗೂ ಮಹಿಳೆಯರ ಹಕ್ಕುಗಳು, ಸಬಲೀಕರಣದ ಬಗ್ಗೆ ಮಾತನಾಡಿದರು.
ಮೂಡುಬಿದಿರೆ ಬ್ರಾಂಚ್ ಅದ್ಯಕ್ಷೆ ಮಿಸ್ರಿಯ, ವಾಲ್ಪಾಡಿಯ ಅಬೀದ, ಹಾಗೂ ಕೋಟೆಬಾಗಿಲಿನ ಶಮೀಮ ಹಾಗು ಎಲ್ಲಾ ಬ್ರಾಂಚ್ ನ ಸದಸ್ಯರು ಉಪಸ್ಥಿತರಿದ್ದರು. ಮೆಹ್ತಾಬ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಮಾಸುಮ ದನ್ಯವಾದ ಸಮರ್ಪಣೆ ನಿರ್ವಹಿಸಿದರು.
Next Story





