ಮಂಗಳೂರು: ನಕಲಿ ಇಮೇಲ್ ಐಡಿ ಸೃಷ್ಟಿಸಿ ವಂಚನೆ: ಪ್ರಕರಣ ದಾಖಲು

ಮಂಗಳೂರು, ಆ.1: ಗೆಳೆಯನ ಹೆಸರಿನಲ್ಲಿ ನಕಲಿ ಇಮೇಲ್ ಐಡಿ ಸೃಷ್ಟಿಸಿ ಆ ಮೂಲಕ ಸಂದೇಶ ಕಳುಹಿಸಿ 3.56 ಲಕ್ಷ ರೂ. ಪಡೆದು ಬಳಿಕ ವಂಚಿಸಿದ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
ದೂರುದಾರರ ಸ್ನೇಹಿತ ಕ್ಯಾಪ್ಟನ್ ಜಾನ್ ಪ್ರಸಾದ್ ಮಿನೇಜಸ್‌ರ ಹೆಸರಿನಲ್ಲಿ ವ್ಯಕ್ತಿಯೊಬ್ಬ ನಕಲಿ ಇ ಮೇಲ್ ಐಡಿ ಸೃಷ್ಟಿಸಿ ತನ್ನನ್ನು ಜಾನ್ ಪ್ರಸಾದ್ ಮಿನೇಜಸ್ ಎಂದು ಬಿಂಬಿಸಿಕೊಂಡು, ತಾನು ಮೊಮ್ಮಗನನ್ನು ನೋಡಲು ಲಂಡನ್‌ಗೆ ಹೋಗಿದ್ದು, ಅಲ್ಲಿಂದ ವಾಪಸ್ ಬರುವಾಗ ಪತ್ನಿಯ ಅನಾರೋಗ್ಯದ ಕಾರಣ ವಿಮಾನ ತಪ್ಪಿ ಹೋಗಿವೆ. ಹಾಗಾಗಿ ಮತ್ತೆ ವಿಮಾನದ ಟಿಕೆಟ್ ಪಡೆಯಲು ತುರ್ತಾಗಿ ಹಣ ಕಳುಹಿಸುವಂತೆ ಜು.26ರಂದು ಇಮೇಲ್ ಸಂದೇಶದ ಮೂಲಕ ಕೇಳಿಕೊಂಡಿದ್ದ.
ಅದನ್ನು ನಂಬಿದ ದೂರುದಾರರು ಜು.26ರಿಂದ 31ರವರೆಗೆ 3.56 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ. ಬಳಿಕ ವಿಚಾರಿಸಿದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story