ಮಂಗಳೂರು | ಉಚಿತ ನ್ಯಾಚುರೋಪತಿ, ಯೋಗ ಚಿಕಿತ್ಸಾ ಶಿಬಿರ

ಮಂಗಳೂರು, ನ.16: ಎಂಟನೇ ರಾಷ್ಟ್ರೀಯ ನ್ಯಾಚುರೋಪತಿ ದಿನದ ಅಂಗವಾಗಿ ನರಿಂಗಾನದ ಯೆನೆಪೊಯ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ, ಶ್ರೀ ಮುನೀಶ್ವರ ಮಹಾಗಣಪತಿ ಸೇವಾ ಟ್ರಸ್ಟ್, ಶ್ರೀ ಮುನೀಶ್ವರ ವತಿಯಿಂದ ನ.13ರಂದು ಉಚಿತ ನ್ಯಾಚುರೋಪತಿ ಮತ್ತು ಯೋಗ ಚಿಕಿತ್ಸಾ ಶಿಬಿರ ನಗರದ ಮಹಾಗಣಪತಿ ಕಲಾ ಮಂಟಪದಲ್ಲಿ ನಡೆಯಿತು.
ಯೆನೆಪೋಯ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜಿನ ಡಾ.ಅಭಿಜ್ಞಾ ಮತ್ತು ಡಾ.ಪ್ರತೀಕ್ಷಾ ಭಾಗವಹಿಸಿ, ಶಿಬಿರದಲ್ಲಿ ಚಿಕಿತ್ಸಾ ಸಲಹೆ ಹಾಗೂ ಯೋಗ ಮಾರ್ಗದರ್ಶನ ನೀಡಿದರು.
ಒಟ್ಟು 80 ಮಂದಿ ರೋಗಿಗಳುಈ ಶಿಬಿರದಲ್ಲಿ ಭಾಗವಹಿಸಿ, ನ್ಯಾಚುರೋಪತಿ ಮತ್ತು ಯೋಗದ ಮೂಲಕ ಚಿಕಿತ್ಸಾ
ಸಲಹೆಗಳು, ಥೆರಪಿಗಳು ಹಾಗೂ ಜೀವನಶೈಲಿ ಮಾರ್ಗದರ್ಶನದಿಂದ ಪ್ರಯೋಜನ ಪಡೆದರು.
Next Story





