ಮಂಗಳೂರು| ಚಿನ್ನಾಭರಣ ಕಳವು: ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಮಂಗಳೂರು, ಆ.4: ನಗರದ ಬಲ್ಲಾಳ್ಬಾಗ್ ವಿವೇಕನಗರದ ಮನೆಯೊಂದರಿಂದ ಸುಮಾರು 8.55 ಲ.ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.22ರಂದು ಮನೆಯ ಸದಸ್ಯರು ಹೊರಗೆ ಹೋಗಿದ್ದರು. ಮನೆಯಲ್ಲಿ ಹೋಂ ನರ್ಸ್ ಮತ್ತು ಅನಾರೋಗ್ಯದ ವಯೋವೃದ್ಧೆ ಮಾತ್ರ ಇದ್ದರು. ಜು.26ರಂದು ಸೇಫ್ಲಾಕರ್ನ ಕೀ ಹುಡುಕಾಡಿದಾಗ ಕೀ ಸಿಕ್ಕಿರಲಿಲ್ಲ. ಜು.28ರಂದು ಹೊಸ ಲಾಕ್ ಮತ್ತು ಕೀಯನ್ನು ಮಾಡಲಾಗಿತ್ತು. ಜು.29ರಂದು ಆ ಕೀಯ ಸಹಾಯದಿಂದ ಗೋದ್ರೆಜ್ ಕಪಾಟಿನ ಸೇಫ್ಲಾಕರ್ ತೆರೆದಾಗ ಅದರಲ್ಲಿದ್ದ 171 ಗ್ರಾಂ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ ಎಂದು ಮನೆಯ ಯಜಮಾನಿ ಪೂಜಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Next Story





