Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರು: ಪುರಭವನದಲ್ಲಿ ಗ್ರ್ಯಾಂಡ್...

ಮಂಗಳೂರು: ಪುರಭವನದಲ್ಲಿ ಗ್ರ್ಯಾಂಡ್ ಮೌಲಿದ್ ಮಜ್ಲಿಸ್

ವಾರ್ತಾಭಾರತಿವಾರ್ತಾಭಾರತಿ1 Sept 2025 9:54 PM IST
share
ಮಂಗಳೂರು: ಪುರಭವನದಲ್ಲಿ ಗ್ರ್ಯಾಂಡ್ ಮೌಲಿದ್ ಮಜ್ಲಿಸ್

ಮಂಗಳೂರು, ಸೆ.1: ಪ್ರವಾದಿ ಮುಹಮ್ಮದ್(ಅ) ಅವರಿಗೆ ಅಲ್ಲಾಹನು ಅತ್ಯನ್ನತ ಪದವಿಯನ್ನು ನೀಡಿದ್ದಾನೆ. ಅವರ ವ್ಯಕ್ತಿತ್ವ , ಸ್ವಭಾವ ಕುರ್‌ಆನ್ ಆಗಿದೆ ಎಂದು ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಹೇಳಿದ್ದಾರೆ.

ಲೋಕಾನುಗ್ರಹಿ ಪ್ರವಾದಿ ಮುಹಮ್ಮದ್(ಸ.)ರ 1500ನೇ ಜನ್ಮ ದಿನ ಸಂಭ್ರಮಾಚರಣೆ ಅಂಗವಾಗಿ ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಯುವಜನ ಸಂಘ, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ದ.ಕ. ಜಿಲ್ಲಾ ವೆಸ್ಟ್ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಮಂಗಳೂರಿನ ಪುರಭವನದಲ್ಲಿ ನಡೆದ ಗ್ರ್ಯಾಂಡ್ ಮೌಲಿದ್ ಮಜ್ಲಿಸ್ ಅನ್ನು ಉದ್ಘಾಟಿಸಿ ಮಾತನಾಡಿದರು.

ಕುರ್‌ಆನ್‌ನ ಆಯತ್‌ಗಳಿಗೆ ಧಾರಾಳ ಅರ್ಥಗಳಿವೆ , ವ್ಯಾಖ್ಯಾನಗಳಿಗೆ ಹೇಗೆ ಕೊನೆ ಇಲ್ಲವೋ ಹಾಗೆಯೇ ಪ್ರವಾದಿಯವರ ವ್ಯಕ್ತಿತ್ವ ಸ್ವಭಾವ ಅವರ್ಣನೀಯ, ಪ್ರವಾದಿಯವರ ಸ್ವಭಾವವನ್ನು ಬಣ್ಣಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಆರಿಫ್ ಸಅದಿ ಭಟ್ಕಳ ಗ್ರ್ಯಾಂಡ್ ಮೌಲಿದ್ ಮಜ್ಲಿಸ್‌ನ ನೇತೃತ್ವ ವಹಿಸಿದ್ದರು.

*ಇಲಲ್ ಹಬೀಬ್’ ಮೀಲಾದ್ ರ‍್ಯಾಲಿ: ಇದಕ್ಕೂ ಮೊದಲು ಜ್ಯೋತಿ ವೃತ್ತದಿಂದ ಪುರಭವನ ತನಕ ‘ಇಲಲ್ ಹಬೀಬ್’ ಮೀಲಾದ್ ರ‍್ಯಾಲಿ ನಡೆಯಿತು.

ಸತ್ಯವಂತ ಪ್ರವಾದಿ: ರ್ಯಾಲಿಯಲ್ಲಿ ಹುಸೈನ್ ಮುಈನಿ ಮಾರ್ನಾಡ್ ಸಂದೇಶ ನೀಡಿ ಜಗತ್ತಿನ ಇತಿಹಾಸದಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರಂತಹ ಪ್ರಾಮಾಣಿಕ, ಪ್ರಬುದ್ಧ , ಸತ್ಯವಂತ ಇನ್ನೊಬ್ಬರು ಇಲ್ಲ ಎಂದರು.

ಅತ್ಯಂತ ಸೌಮ್ಯ ಸ್ವಭಾವದರಾಗಿದ್ದ ಪ್ರವಾದಿಯವರು ಪರಿಶುದ್ಧ ಕುರ್ ಆನ್‌ನ ಅತ್ಯಂತ ಸುಂದರವಾದ ಸಂದೇಶ ವನ್ನು ಜಗತ್ತಿಗೆ ಕಲಿಸಿಕೊಟ್ಟರು ದೇಶಭಕ್ತಿ, ತಾಯ್ನೆಲದ ಮೇಲಿನ ಪ್ರೀತಿಯನ್ನು, ಸುಂದರ ಬದುಕಿನ ವಿಧಾನವನ್ನು , ಶಾಂತಿ, ಸೌಹಾರ್ದತೆಯ , ಸಾಮರಸ್ಯದ, ಮಾನವೀಯತೆಯ ಅತೀ ದೊಡ್ಡ ಪಾಠವನ್ನು ಕಲಿಸಿಕೊಟ್ಟರು ಎಂದು ಹೇಳಿದರು.

ಮೀಲಾದ್ ಸಮಿತಿಯ ಚೇರ್‌ಮ್ಯಾನ್ ಬಶೀರ್ ಹಾಜಿ ಬಿ.ಸಿ.ರೋಡು ಅಧ್ಯಕ್ಷತೆ ವಹಿಸಿದ್ದರು.ಹುಬ್ಬುರ‌್ರಸೂಲ್ ಕಾನ್ಫೆರೆನ್ಸ್ ನಿರ್ವಹಣಾ ಸಮಿತಿ ಜನರಲ್ ಕನ್ವೀನರ್ ಹಾಫಿಳ್ ಯಾಕೂಬ್ ಸಅದಿ ನಾವೂರು,ಮಹ್ಬೂಬ್ ಸಖಾಫಿ ಕಿನ್ಯ , ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ , ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ, ಬಶೀರ್ ಅಹ್ಮದ್ ಪಂಜಿಮೊಗರು, ಹನೀಫ್ ಹಾಜಿ ಬಜ್ಪೆ , ಹನೀಫ್ ಹಾಜಿ ಉಳ್ಳಾಲ, ಹಮೀದ್ ಬಜ್ಪೆ, ಇಸ್ಹಾಕ್ ಝುಹ್ರಿ, ಮುಹಮ್ಮದ್ ಆಶಿಫ್ ಕೃಷ್ಣಾಪುರ, ಅಬ್ದುಲ್ ರಹ್ಮಾನ್ ಪ್ರಿಂಟೆಕ್, ರವೂಫ್ ಹಿಮಮಿ ಹಳೆಯಂಗಡಿ, ರಹೀಂ ಸಅದಿ ಖತರ್, ಇಬ್ರಾಹೀಂ ಖಲೀಲ್ ಮಾಲಿಕಿ , ಹಾಫಿಳ್‌ಯಾಕೂಬ್ ಸಅದಿ ನಾವೂರು , ಬಿಎಚ್ ಇಸ್ಮಾಯಿಲ್ , ಇಸ್ಮಾಯಿಲ್ ಕಿನ್ಯ ನವಾಝ್ ಸಖಾಫಿ ಅಡ್ಯಾರ್ ಪದವು, ಜಬ್ಬಾರ್ ಕಣ್ಣೂರು ಸಿನಾನ್ ಸಖಾಫಿ ಅಜಿಲಮೊಗರು, ಶಾಕಿರ್ ಎಎಸ್‌ಸಿ, ಹಸನ್ ಪಾಂಡೇಶ್ವರ , ರಝಾಕ್ ಭಾರತ್, ತೌಸಿಫ್ ಸಅದಿ ಹರೇಕಳ, ಹಾಫಿಳ್ ಮಜೀದ್ ಸಖಾಫಿ ಗಾಣೆಮಾರ್, ಬದ್ರುದ್ದೀನ್ ಅಝ್ಹರಿ ಕೈಕಂಬ ಇಬ್ರಾಹೀಂ ಅಹ್ಸನಿ ಮಂಜನಾಡಿ, ಹನೀಫ್ ಇಂಜಿನಿಯರ್ ಪೇರಿಮಾರ್ , ನಝೀರ್ ಹಾಜಿ ಲುಲು ಮತ್ತಿತರರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.













share
ವಾರ್ತಾಭಾರತಿ
ವಾರ್ತಾಭಾರತಿ
Next Story
X