ಮಂಗಳೂರು: ಹಿರಿಯ ಉದ್ಯಮಿ ಇಬ್ರಾಹೀಮ್ ಅಮ್ಯಾಕೋ ನಿಧನ

ಮಂಗಳೂರು, ಜು.25: ನಗರದ ಕಾಪ್ರಿಗುಡ್ಡ ನಿವಾಸಿ, ಹಿರಿಯ ಉದ್ಯಮಿ ಹಾಗೂ ಕೊಡುಗೈ ದಾನಿ ಎ.ಎಂ. ಇಬ್ರಾಹೀಮ್ ಅಮ್ಯಾಕೋ (78) ಶುಕ್ರವಾರ ತನ್ನ ಮನೆಯಲ್ಲಿ ನಿಧನರಾದರು.
ಪತ್ನಿ ಮತ್ತು ಉದ್ಯಮಿ ಆಸಿಫ್ ಅಮ್ಯಾಕೋ ಸಹಿತ ಏಳು ಮಂದಿ ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಯಶಸ್ವಿ ಉದ್ಯಮಿಯಾಗಿದ್ದ ಅವರು ಸರಳತೆಗೆ ಯಶಸ್ವಿಯಾಗಿದ್ದರು. ಅರ್ಹರಿಗೆ ಸದಾ ನೆರವು ನೀಡುತ್ತಿದ್ದರು.
ಜನಾಝ ನಮಾಝ್ ಶನಿವಾರ ಬೆಳಗ್ಗೆ ಸುಮಾರು 10ಕ್ಕೆ ಬಂದರ್ ಝೀನತ್ ಬಕ್ಷ್ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇಬ್ರಾಹೀಮ್ ಅಮ್ಯಾಕೋ ನಿಧನಕ್ಕೆ ಸ್ಪೀಕರ್ ಯುಟಿ ಖಾದರ್, ಯುಟಿ ಇಫ್ತಿಕಾರ್, ಝಕರಿಯಾ ಜೋಕಟ್ಟೆ ಸಂತಾಪ ಸೂಚಿಸಿದ್ದಾರೆ.
Next Story





