ಮಂಗಳೂರು: ‘ಜೋಸ್ ಆಲುಕ್ಕಾಸ್’ ನವೀಕೃತ ಶೋರೂಮ್ ಉದ್ಘಾಟನೆ

ಮಂಗಳೂರು, ಆ.19: ನಗರದ ಹಂಪನಕಟ್ಟೆಯ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿರುವ ‘ಜೋಸ್ ಆಲುಕ್ಕಾಸ್’ ನ ನವೀಕೃತ ಶೋರೂಮ್ ಶನಿವಾರ ಉದ್ಘಾಟನೆಗೊಂಡಿತು.
ಮಂಗಳೂರಿನ ಮೂರನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಎಸ್. ಅವರು ನವೀಕೃತ ಶೋರೂಮ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ‘ಜೋಸ್ ಆಲುಕ್ಕಾಸ್’ ಆಭರಣಪ್ರಿಯರ ಮಧ್ಯೆ ಮನೆ ಮಾತಾಗಿದ್ದು, ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ವ್ಯಾಪಾರದೊಂದಿಗೆ ಸಮಾಜ ಸೇವೆಯಲ್ಲೂ ‘ಜೋಸ್ ಆಲುಕ್ಕಾಸ್’ ಮುಂಚೂಣಿಯಲ್ಲಿರುವುದು ಶ್ಲಾಘನೀಯ. ‘ಜೋಸ್ ಆಲುಕ್ಕಾಸ್’ ತನ್ನ ಗುರಿಯನ್ನು ಯಶಸ್ವಿಯಾಗಿ ಸಾಧಿಸಲಿ’ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಿತ್ರನಟ ರೂಪೇಶ್ ಶೆಟ್ಟಿ, ಚಿತ್ರನಟಿ ರಚನಾ ರೈ, ನ್ಯಾಯವಾದಿ ಬಿ. ಗುರುಪ್ರಸಾದ್ ಶೆಟ್ಟಿ ಶುಭ ಹಾರೈಸಿದರು.
‘ಜೋಸ್ ಆಲುಕ್ಕಾಸ್’ನ ಮ್ಯಾನೇಜಿಂಗ್ ಡೈರಕ್ಟರ್ ಗಳಾದ ವರ್ಗೀಸ್ ಅಲುಕ್ಕಾ, ಪೌಲ್ ಜೆ. ಅಲುಕ್ಕಾ, ಜಾನ್ ಅಲುಕ್ಕಾ, ಎಚ್ಆರ್ಡಿ ಟೋನಿ ಇಗ್ನೇಶಿಯಸ್, ಸೇಲ್ಸ್ ಹೆಡ್ ಜೋಸೆಫ್, ಎಸ್.ಸಿ.ಎಂ.ಸಂತೋಷ್, ಏರಿಯಾ ಮ್ಯಾನೇಜರ್ ಬಿಜು ಟಿಎಲ್, ಮ್ಯಾನೇಜರ್ ಗಳಾದ ಅಗಸ್ಟಿನ್, ಗ್ನಿಂಟೋ ಜಾನಿ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ಚೇತನ್ ಪಿಲಿಕುಳ ಕಾರ್ಯಕ್ರಮ ನಿರೂಪಿಸಿದರು.
--------------------------------------------------------------
♦ ನವೀಕೃತ ಶೋರೂಮ್ ಉದ್ಘಾಟನೆಯ ಪ್ರಯುಕ್ತ ಗ್ರಾಹಕರಿಗೆ ಚಿನ್ನದ ನಾಣ್ಯದ ಉಡುಗೊರೆ ಸಿಗಲಿದೆ. 50 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸುವ ಗ್ರಾಹಕರು ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ಪಡೆಯಲಿದ್ದಾರೆ. ಈ ಕೊಡುಗೆಯು ಆಗಸ್ಟ್ 23ರವರೆಗೆ ಲಭ್ಯವಿದೆ.
♦ ನವೀಕೃತ ಶೋರೂಮ್ ನಲ್ಲಿ ವಿಶಿಷ್ಟ ವಿನ್ಯಾಸದ ಚಿನ್ನ, ವಜ್ರ, ಪ್ಲಾಟಿನಂ ಆಭರಣಗಳ ಅಪಾರ ಸಂಗ್ರಹವೇ ಇವೆ.
♦ ಈಗಾಗಲೆ ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳಲ್ಲಿ 50 ಶೋರೂಮ್ ಗಳು ಕಾರ್ಯಾಚರಿಸುತ್ತಿವೆ. ಮುಂದಿನ ದಿನಗಳಲ್ಲಿ 550 ಕೋ.ರೂ. ವೆಚ್ಚದಲ್ಲಿ 100 ಶೋರೂಮ್ ಗಳನ್ನು ತೆರೆಯುವ ಗುರಿಯನ್ನು ‘ಜೋಸ್ ಅಲುಕ್ಕಾಸ್’ ಹೊಂದಿದೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.







