ಮಂಗಳೂರು | ಜೆರೋಸಾ ಶಾಲೆಯ ಪ್ರಕರಣದ ತನಿಖೆಗೆ ತನಿಖಾಧಿಕಾರಿ ನೇಮಕ: ದಿನೇಶ್ ಗುಂಡೂರಾವ್
"ಶಿಕ್ಷಕಿ ಮೇಲಿನ ಆರೋಪ ಮತ್ತು ಬಳಿಕದ ಬೆಳವಣಿಗೆಗಳ ಬಗ್ಗೆ ಸಮಗ್ರ ತನಿಖೆ"

ಮಂಗಳೂರು, ಫೆ.16: ನಗರದ ಜೆರೋಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಿಂದ ಧರ್ಮ ಅವಹೇಳನ ಆರೋಪ ಪ್ರಕರಣ ಹಾಗೂ ಬಳಿಕ ನಡೆದ ಘಟನೆಗಳ ಬಗ್ಗೆ ತನಿಖೆಗೆ ಸರಕಾರವು ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿದೆ.
ಈ ಬಗ್ಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಮಾಹಿತಿ ನೀಡಿದ ದ. ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸರಕಾರವು ಜೆರೋಸಾ ಪ್ರಕರಣದ ತನಿಖೆಗೆ ಹಿರಿಯ ಐಎಎಸ್ ಅಧಿಕಾರಿ ಹಾಗೂ ಕಲಬುರಗಿಯ ಶಿಕ್ಷಣ ಇಲಾಖೆಯ ಅಪರ ಆಯುಕ್ತರೂ ಆಗಿರುವ ಆಕಾಶ್ ಅವರನ್ನು ನೇಮಕ ಮಾಡಿದೆ ಎಂದು ತಿಳಿಸಿದರು.
ಶಾಲೆಯ ಶಿಕ್ಷಕಿ ಮೇಲಿನ ಆರೋಪ ಹಾಗೂ ಆನಂತರ ನಡೆದಿರುವ ಎಲ್ಲ ಬೆಳವಣಿಗೆಗೆ ಸಂಬಂಧಿಸಿ ತನಿಖಾಧಿಕಾರಿಯು ಸಮಗ್ರ ತನಿಖೆ ನಡೆಸಿ ಶೀಘ್ರದಲ್ಲೇ ಸರಕಾರಕ್ಕೆ ವರದಿ ನೀಡಲಿದ್ದಾರೆ ಎಂದರು.
Next Story





