ಮಂಗಳೂರು | ವೀಕೆಂಡ್ ವಾರಿಯರ್ಸ್ ನಿಂದ ಜರ್ಸಿ ಬಿಡುಗಡೆ

ಹಸನ್ ಬಜಾಲ್ ಅವರಿಗೆ ಸನ್ಮಾನ
ಮಂಗಳೂರು, ನ.22: ಕೇವಲ ಕ್ರೀಡೆಗೆ ಮಾತ್ರ ಆದ್ಯತೆ ನೀಡದೆ ಸಮಾಜದಲ್ಲಿ ನೊಂದವರ ತಮ್ಮಿಂದಾದ ನೆಲೆಯಲ್ಲಿ ಸಹಾಯ ಮಾಡುವುದು ಪುಣ್ಯದಾಯಕ, ಆ ಕಾರ್ಯ ಸಂಘಟನೆ ಮಾಡುತ್ತಿದೆ ಎಂದು ಸಮಾಜ ಸೇವಕ ಹಸನ್ ಬಜಾಲ್ ಶ್ಲಾಘಿಸಿದರು.
ಬಜಾಲ್‌ನ ವೀಕೆಂಡ್ ವಾರಿಯರ್ಸ್ ವತಿಯಿಂದ ಶನಿವಾರ ಜೆರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವೀಕೆಂಡ್ ವಾರಿಯರ್ಸ್ ಕಳೆದ 4 ವರ್ಷಗಳಿಂದ ಸಾಮಾಜಿಕ ಸೇವೆಯ ಮೂಲಕ ನೊಂದವರ ಪಾಲಿನ ಆಶಾಕಿರಣವಾಗಿ ಮೂಡಿಬಂದಿದೆ. ಸಮಾಜದಲ್ಲಿರುವ ತೆರೆಮರೆಯ ಸಾಧಕರು ಮತ್ತು ಸಮಾಜ ಸೇವಕರನ್ನು ಗುರುತಿಸುವ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ವೀಕೆಂಡ್ ವಾರಿಯರ್ಸ್ ಅಧ್ಯಕ್ಷ ತುಫೇಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸವಾದ್, ಕಾರ್ಯದರ್ಶಿಗಳಾದ ಅಶ್ರಫ್, ಉಸ್ಮಾನ್ ಮತ್ತಿತರರು ಉಪಸ್ಥಿತರಿದ್ದರು.
ಬಿಲಾಲ್ ಪಕ್ಕಲಡ್ಕ ಸ್ವಾಗತಿಸಿದರು. ಹೈದರ್ ಮಕಾಂದಾರ ಕಾರ್ಯಕ್ರಮ ನಿರೂಪಿಸಿದರು.
Next Story





