ಮಂಗಳೂರು ಲಿಟ್ ಫೆಸ್ಟ್‌ಗೆ ಚಾಲನೆ

ಮಂಗಳೂರು, ಜ.10: ಮಂಗಳೂರು, ಜ.10: ಭಾರತ್ ಫೌಂಡೇಶನ್ ವತಿಯಿಂದ ನಗರದ ಡಾ.ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಎರಡು ದಿನ ನಡೆಯಲಿರುವ 8ನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್‌ಗೆ ಶನಿವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಲಿಟ್ ಫೆಸ್ಟ್‌ನ 2026ನೇ ಆವೃತ್ತಿಯ ಪ್ರಶಸ್ತಿಯನ್ನು ಸ್ವೀಕರಿಸಿ ನಾಗರೀಕತೆಯ ಜೊತೆಗೆ ಮರು ಸಂಪರ್ಕ ಎಂಬ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತೆ, ರಾಜ್ಯಸಭಾ ಸದಸ್ಯೆ ಡಾ. ಮೀನಾಕ್ಷಿ ಜೈನ್ ಕೆಲವು ನಾಗರಿಕತೆಗಳು ಕಾಲಾನುಕ್ರಮದಲ್ಲಿ ನಶಿಸಿ ಹೋಗಿವೆ. ಆದರೆ ನಮ್ಮ ನಾಗರಿಕತೆ ಹಲವು ದಾಳಿಗಳ ನಂತರವೂ ಜೀವಂತವಾಗಿದೆ. ಅದಕ್ಕೆ ಜನ ಸಾಮಾನ್ಯರು ಮತ್ತವರ ನಂಬಿಕೆ ಕಾರಣ ಎಂದರು.
ಅಗ್ರಿಲೀಫ್ ಸಂಸ್ಥೆಯ ಚೀಫ್ ಆಫ್ ಸ್ಟಾಫ್ ಪೃಥ್ವಿ ಕಾರಿಂಜೆ ಸಂವಾದ ನಡೆಸಿಕೊಟ್ಟರು. ಈ ಸಂದರ್ಭ ಶತಾವಧಾನಿ ಆರ್. ಗಣೇಶ್, ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ಎಸ್. ರವಿ, ಭಾರತ್ ಫೌಂಡೇಶನ್‌ನ ಟ್ರಸ್ಟಿಗಳಾದ ಸುನೀಲ್ ಕುಲಕರ್ಣಿ, ಸುಜಿತ್ ಪ್ರತಾಪ್, ದುರ್ಗಾ ರಾಮದಾಸ್ ಕಟೀಲ್, ಶ್ರೀರಾಜ್ ಗುಡಿ ಉಪಸ್ಥಿತರಿದ್ದರು.





