ಮಂಗಳೂರು: ಹಣ ದ್ವಿಗುಣಗೊಳಿಸುವುದಾಗಿ ಆನ್‌ಲೈನ್ ವಂಚನೆ; ಪ್ರಕರಣ ದಾಖಲು

ಮಂಗಳೂರು, ಜು.24: ಹಣವನ್ನು ಆನ್‌ಲೈನ್ ಮೂಲಕ ಹೂಡಿದರೆ ದ್ವಿಗುಣಗೊಳಿಸಿ ಕೊಡುವುದಾಗಿ ಹೇಳಿ ಅಪರಿಚಿತನೊಬ್ಬ ತನಗೆ 3.41 ಲಕ್ಷ ರೂ. ವಂಚಿಸಿದ್ದಾನೆ ಎಂದು ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ ಸೈಬರ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತನ್ನ ಇನ್‌ಸ್ಟಾಗ್ರಾಂ ಖಾತೆಗೆ ಪಾರ್ಟ್‌ಟೈಂ ಜಾಬ್ ಬಗ್ಗೆ ಅಪರಿಚಿತ ವ್ಯಕ್ತಿ ಸಂದೇಶ ಕಳುಹಿಸಿದ್ದ. ತನ್ನನ್ನು ಕ್ರಿಪ್ಟೋ ಅಕೌಂಟ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ಆತ ತನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಿದರೆ ಡಬಲ್ ಕೊಡುವುದಾಗಿ ತಿಳಿಸಿದ. ಬಳಿಕ ಹಂತ ಹಂತವಾಗಿ 3.14 ಲ.ರೂ.ವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಹಣ ಕಳಕೊಂಡ ವ್ಯಕ್ತಿಯು ದೂರಿನಲ್ಲಿ ತಿಳಿಸಿದ್ದಾರೆ.
Next Story