ಮಂಗಳೂರು: ಬ್ಯಾರೀಸ್ ನಾಲೆಜ್ ಕ್ಯಾಂಪಸ್ನಲ್ಲಿ ಗಣರಾಜ್ಯೋತ್ಸವ ಆಚರಣೆ

ಮಂಗಳೂರು: ಇನೋಳಿಯ ಬ್ಯಾರೀಸ್ ನಾಲೆಜ್ ಕ್ಯಾಂಪಸ್ ನಲ್ಲಿ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಬ್ಯಾರೀಸ್ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಎಸ್. ಐ. ಮಂಝೂರ್ ಬಾಷಾ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅವರು ತಮ್ಮ ಭಾಷಣದಲ್ಲಿ ಗಣರಾಜ್ಯೋತ್ಸವದ ಮಹತ್ವವನ್ನು ವಿವರಿಸಿದರು. ಜವಾಬ್ದಾರಿಯುತ ಮತ್ತು ಶಿಸ್ತಿನ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರದ ಬಗ್ಗೆ ಮಾತನಾಡಿದರು.
ಧ್ವಜಾರೋಹಣವನ್ನು ಮೈಸೂರಿನ ರಾಷ್ಟ್ರೀಯ ಎಂಜಿನಿಯರಿಂಗ್ ಸಂಸ್ಥೆಯ (national Institute of Engineering) ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂಜಿತ್ ಎಸ್. ಅಂಚನ್ ನೆರವೇರಿಸಿದರು. ಅವರು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿದ ಮೌಲ್ಯಗಳು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಜವಾಬ್ದಾರಿ ಬಗ್ಗೆ ಮಾತನಾಡಿದರು.
ಈ ವೇಳೆ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಪ್ರಾಂಶುಪಾಲರಾದ ಡಾ.ಸಿ. ಕಮಲಕಣ್ಣನ್, ಬ್ಯಾರೀಸ್ ಎನ್ವಿರಾನ್ಮೆಂಟ್ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬಿಇಎಡಿಎಸ್) ಪ್ರಾಂಶುಪಾಲರಾದ ಅರ್. ಖಲೀಲ್ ರಝಾಕ್ ಶೇಖ್, ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್ (ಬಿಐಇಎಸ್) ಪ್ರಾಂಶುಪಾಲರಾದ ಡಾ. ಅಝೀಝ್ ಮುಸ್ತಫಾ, ಬ್ಯಾರೀಸ್ ಪಾಲಿಟೆಕ್ನಿಕ್ ನಿರ್ದೇಶಕ ಪ್ರೊ. ಪೃಥ್ವಿರಾಜ್ ಎಂ, ಬಿಐಟಿ, ಬಿಇಎಡಿಎಸ್, ಬಿಐಇಎಸ್, ಬಿಐಪಿಟಿಪಿ ಮತ್ತು ಬಿಐಪಿಯುಸಿ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಿಐಪಿಯುಸಿ ಪ್ರಾಂಶುಪಾಲರಾದ ಅಬ್ದುಲ್ ಲತೀಫ್ ಅವರ ಧನ್ಯವಾದಗಳೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.







