ಮೇಲ್ತೆನೆಯ ಅಧ್ಯಕ್ಷರಾಗಿ ಮಂಗಳೂರು ರಿಯಾಝ್ ಆಯ್ಕೆ

ದೇರಳಕಟ್ಟೆ, ಡಿ.31: ಮೇಲ್ತೆನೆ (ಬ್ಯಾರಿ ಎಲ್ತ್‌ಕಾರ್-ಕಲಾವಿದಮಾರೊ ಕೂಟ) ದೇರಳಕಟ್ಟೆ ಇದರ ವಾರ್ಷಿಕ ಸಭೆಯು ಮಂಗಳವಾರ ಕಾಜೂರಿನ ಖಾಸಗಿ ಹೊಟೇಲಿನಲ್ಲಿ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷ ಇಬ್ರಾಹೀಂ ನಡುಪದವು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ 2026ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಆಲಿಕುಂಞಿ ಪಾರೆ ಪುನರಾಯ್ಕೆಗೊಂಡರು. ಅಧ್ಯಕ್ಷರಾಗಿ ಮಂಗಳೂರು ರಿಯಾಝ್, ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಮಲಾರ್, ಉಪಾಧ್ಯಕ್ಷರಾಗಿ ಇಬ್ರಾಹಿಂ ಮುದುಂಗಾರುಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಸಿ.ಎಂ ಶರೀಫ್ ಪಟ್ಟೋರಿ, ಕೋಶಾಧಿಕಾರಿಯಾಗಿ ವಿ. ಇಬ್ರಾಹೀಂ ನಡುಪದವು ಆಯ್ಕೆಯಾದರು.
ಸದಸ್ಯರಾಗಿ ಟಿ. ಇಸ್ಮಾಯಿಲ್ ಮಾಸ್ಟರ್, ಯೂಸುಫ್ ವಕ್ತಾರ್, ಬಶೀರ್ ಅಹ್ಮದ್ ಕಿನ್ಯ, ಮುಹಮ್ಮದ್ ಬಾಷಾ ನಾಟೆಕಲ್, ಬಶೀರ್ ಕಲ್ಕಟ್ಟ, ಅಶೀರುದ್ದೀನ್ ಸಾರ್ತಬೈಲ್, ಬಿ.ಎಂ. ಕಿನ್ಯ, ಅಬೂಬಕರ್ ಹೂಹಾಕುವ ಕಲ್ಲು, ಮನ್ಸೂರ್ ಅಹ್ಮದ್ ಸಾಮಣಿಗೆ, ಅಶ್ರಫ್ ಡಿ.ಎ. ದೇರ್ಲಕಟ್ಟೆ, ಸಿದ್ದೀಕ್ ಎಸ್. ರಾಝ್, ಆಸೀಫ್ ಬಬ್ಬುಕಟ್ಟೆ, ರಫೀಕ್ ಕಲ್ಕಟ್ಟ, ಹೈದರ್ ಆಲಡ್ಕ ಆಯ್ಕೆಯಾದರು.
ಆರು ವರ್ಷದ ಹಿಂದೆ ಆರಂಭಿಸಲಾಗಿದ್ದ ಮೇಲ್ತೆನೆ ಇ-ಪೇಪರ್ ಅನ್ನು ಹಂಝ ಮಲಾರ್ ಮತ್ತು ಬಶೀರ್ ಅಹ್ಮದ್ ಕಿನ್ಯ ಅವರ ಸಂಪಾದಕತ್ವದಲ್ಲಿ ಪುನಃ ಹೊರತರಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.







