ಮಂಗಳೂರು | ಎದುರುಪದವಿನಲ್ಲಿ ಸಮಸ್ತ ಪ್ರಾರ್ಥನಾ ದಿನ ಆಚರಣೆ

ಮಂಗಳೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಆದೇಶದಂತೆ, ಸಮಸ್ತ ಪ್ರಾರ್ಥನಾ ದಿನವನ್ನು ಮಂಗಳೂರು ಹೊರವಲಯದ ಎದುರುಪದವಿನ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಮಸೀದಿ ಮತ್ತು ಮದರಸದ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ ದುವಾ ಮೂಲಕ ಉದ್ಘಾಟಿಸಿದರು. ಮದರಸಕ್ಕಾಗಿ ದೀರ್ಘಕಾಲ ಶ್ರಮಿಸಿದ ಹಿರಿಯರನ್ನು ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಎ.ಪಿ.ಇಕ್ಬಾಲ್ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಸೀದಿ ಹಾಗೂ ಮದರಸದ ಮಾಜಿ ಅಧ್ಯಕ್ಷರಾದ ಎಸ್.ಆಲಿಯಬ್ಬ, ಹಾಜಿ ಮುಹಮ್ಮದ್ ಹನೀಫ್, ಮೂಸಬ್ಬ, ಜಬ್ಬಾರ್ ಎಂಡಿ, ಹಿರಿಯರಾದ ಮುಹಮ್ಮದ್ ಶರೀಫ್, ಮಾಜಿ ಕಾರ್ಯದರ್ಶಿ ಮಹಮ್ಮದ್ ಹನೀಫ್, ಅಬ್ದುಲ್ ಖಾದರ್, ರಝಾಕ್ ಮಂದಾರ, ಸಿದ್ದೀಕ್ ಪಿಲಿಕುಳ, ಬದ್ರುದ್ದೀನ್ ವಾಮಂಜೂರು, ಬದ್ರುದ್ದೀನ್ ಪಿಲಿಕುಳ, ಹಮೀದ್ ಕುಳೂರು, ಟಿ. ಮಹಮ್ಮದ್, ಉಪಾಧ್ಯಕ್ಷ ಅಬ್ದುಲ್ ರಝಾಕ್ ಎ.ಆರ್, ಅಬ್ದುಲ್ ಖಾದರ್ ಎ.ಕೆ, ಸದರ್ ಉಸ್ತಾದ್ ಝುಬೈರ್ ಯಮಾನಿ ಜೋಕಟ್ಟೆ, ಪ್ರಧಾನ ಕಾರ್ಯದರ್ಶಿ ಸಾಜುದ್ದೀನ್, ಜೊತೆ ಕಾರ್ಯದರ್ಶಿ ಮಹಮ್ಮದ್ ಅರೀಫ್, ಕೋಶಾಧಿಕಾರಿ ಇಮ್ರಾನ್ ಆಲಿ, ಸದಸ್ಯರಾದ ಅತಾವುಲ್ಲಾ, ಮುಸ್ತಾಫ ಎಂ.ಡಿ, ಅಕ್ಬರ್, ಹನೀಫ್ ಕಳಾಯಿ, ಅಹ್ಮದ್ ಬಾವ ಮತ್ತಿತರರು ಉಪಸ್ಥಿತರಿದ್ದರು.





