ಮಂಗಳೂರು | ಶಿವಳ್ಳಿ ಸ್ಪಂದನ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು, ನ.18: ಶಿವಳ್ಳಿ ಸ್ಪಂದನ ವತಿಯಿಂದ ನಗರದ ಕದ್ರಿಯ ಮಾತಾಕೃಪದಲ್ಲಿ 16 ವಿದ್ಯಾರ್ಥಿಗಳಿಗೆ ತಲಾ 8,000 ರೂ. ವಿದ್ಯಾರ್ಥಿ ವೇತನ ನೀಡಲಾಯಿತು.
ಸಂಘಟನೆಯ ಮಂಗಳೂರು ತಾಲೂಕು ಅಧ್ಯಕ್ಷ ವಾಸುದೇವ ಭಟ್ ಅಧ್ಯಕ್ಷತೆ ವಹಿಸಿದ್ದರು. ರಮೇಶ್ ತಂತ್ರಿ, ಡಾ.ಜೆ.ಎನ್.ಭಟ್, ರಾಧಾ ಭಟ್, ನವೀನ್ ಚಂದ್ರ ಕೊಂಚಾಡಿ ಉಪಸ್ಥಿತರಿದ್ದರು.
ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ರಮಾಮಣಿ ಪ್ರಾರ್ಥಿಸಿದರು. ರಾಮಚಂದ್ರ ಭಟ್ ಎಲ್ಲೂರು ಸ್ವಾಗತಿಸಿದರು. ಕದ್ರಿ ವಲಯ ಕೋಶಾಧಿಕಾರಿ ರವಿಕಾಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಕೃಷ್ಣ ಭಟ್ ಕದ್ರಿ ವಂದಿಸಿದರು. ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.
Next Story





