ಮಂಗಳೂರು | ನ.19ರಂದು ರಾಜ್ಯ ಝುಹ್‌ರಿ ಸಂಗಮ
ಮಂಗಳೂರು: ಮಧ್ಯ ಕೇರಳದ ಅತೀ ದೊಡ್ಡ ಧಾರ್ಮಿಕ - ಲೌಕಿಕ ಸಮನ್ವಯ ವಿದ್ಯಾಸಂಸ್ಥೆ ಮಾಡವಣ ಜಾಮಿಅಃ ಅಝೀಝಿಯ್ಯಃ ಇಲ್ಲಿನ ಶರೀಅತ್ ಕಾಲೇಜಿನಲ್ಲಿ ವಿದ್ಯಾರ್ಜನೆ ಗೈದು ಶೈಖುನಾ ಮಾಡವನ ಇಬ್ರಾಹಿಂ ಕುಟ್ಟಿ ಮುಸ್ಲಿಯಾರ್ ರವರ ದಿವ್ಯ ಹಸ್ತದಿಂದ "ಝುಹ್‌ರಿ" ಬಿರುದು ಪಡೆದ ಕರ್ನಾಟಕದ ವಿದ್ವಾಂಸರ ಸಂಗಮವು "ರಾಜ್ಯ ಝುಹ್‌ರಿ ಸಂಗಮ" ಇದೇ ನ.19ರಂದು ಮಂಗಳೂರು ಹೃದಯ ಭಾಗವಾದ ಭಾವುಟಗುಡ್ಡೆಯಲ್ಲಿರುವ ರಾಜ್ಯ ಎಸ್.ವೈ.ಎಸ್ ಕಚೇರಿಯಲ್ಲಿ ನಡೆಯಲಿದೆ.
ಕರ್ನಾಟಕ ಝುಹ್‌ರೀಸ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಇಸ್ಹಾಖ್ ಝುಹ್‌ರಿ ಸೂರಿಂಜೆರವರ ಸಭಾಧ್ಯಕ್ಷತೆಯಲ್ಲಿ ನಡೆಯುವ ಸದ್ರಿ ಸಂಗಮಕ್ಕೆ ಶೈಖುನಾ ಮಾಡವನ ಉಸ್ತಾದರು ದುಅಃ ಆಶೀರ್ವಚನ ನೀಡಲಿದ್ದಾರೆ.
ಝುಹ್‌ರೀಸ್ ರಾಜ್ಯಾಧ್ಯಕ್ಷರಾದ ಪಂಜ ನೂರುದ್ದೀನ್ ಝುಹ್‌ರಿ ರವರು ಉದ್ಘಾಟಿಸಲಿದ್ದು, ರಾಜ್ಯ ಕೋಶಾಧಿಕಾರಿ ಕೊಂಬಾಳಿ ಕೆ.ಎಂ.ಎಚ್ ಝುಹ್‌ರಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಝುಹ್‌ರೀಸ್ ನ್ಯಾಶನಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ಸಿ. ಝುಹ್‌ರಿ ಮಲೇಷ್ಯಾ ವಿಷಯ ಮಂಡನೆ ನಡೆಸಲಿದ್ದಾರೆ.
ಈ ಮಹಾ ಸಂಗಮದಲ್ಲಿ ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿರುವ ಎಲ್ಲಾ ಝುಹ್‌ರಿ ವಿದ್ವಾಂಸರು ಕಡ್ಡಾಯವಾಗಿ ಭಾಗವಹಿಸುವಂತೆ ರಾಜ್ಯ ಝುಹ್‌ರೀಸ್ ಪ್ರಧಾನ ಕಾರ್ಯದರ್ಶಿ ಎ.ಎಂ. ಫೈಝಲ್ ಝುಹ್‌ರಿ ಕಲ್ಲುಗುಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







