ಮಂಗಳೂರು| ನಿಟ್ಟೆ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ವಿನಯ ಹೆಗ್ಡೆಗೆ ಶ್ರದ್ಧಾಂಜಲಿ

ಮಂಗಳೂರು: ನಿಟ್ಟೆ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ವಿನಯ ಹೆಗ್ಡೆ ಅವರಿಗೆ ನಗರದ ಟಿ.ಎಂ.ಎ ಪೈ ಸಭಾಂಗಣದಲ್ಲಿ ಇಂದು ನಿಟ್ಟೆ ಗುತ್ತು ಕುಟುಂಬದ ವತಿಯಿಂದ ನಡೆದ ಉತ್ತರಕ್ರೀಯೆ ಮತ್ತು ಶ್ರದ್ಧಾಂಜಲಿ ಕಾರ್ಯ ಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವಿನಯ ಹೆಗ್ಡೆಯವರ ಸಹೋದರ ವಿಶ್ರಾಂತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಹಾಗೂ ಭಾರತೀಯ ರೆಡ್ ಕ್ರಾಸ್ ನ ದ.ಕ ಜಿಲ್ಲಾ ಘಟಕದ ಸಭಾಪತಿ ಸಿ.ಎ.ಶಾಂತಾರಾಮ ಶೆಟ್ಟಿಯವರು ಸದ್ಗತಿಯ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಯು.ಟಿ.ಖಾದರ್, ಶಾಸಕರು, ಮಾಜಿ ಸಚಿವರು , ಸಂಸದರು, ಮಾಜಿ ಸಂಸದರು, ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಎ.ಜೆ.ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ್ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಯೆನೆಪೋಯ ಪರಿಗಣಿತ ವಿಶ್ವ ವಿದ್ಯಾ ನಿಲಯದ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ, ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಶಾಂತರಾಮ ಶೆಟ್ಟಿ, ಗಣೇಶ್ ಕಾರ್ನಿಕ್ , ನಿಟ್ಟೆ ಗುತ್ತು ಕುಟುಂಬದ ಸದಸ್ಯರಾದ ಕ್ಯಾ.ಪ್ರಸನ್ನ ಹೆಗ್ಡೆ, ನಿರ್ಮಲಾ ಅಡ್ಯಂತಾಯ, ಅಶಾ ಅಜಿಲ, ಸುಜಾತಾ ವಿನಯ ಹೆಗ್ಡೆ, ಅಶ್ವಿತ, ರೋಹಿತ್ ಪೂಂಜ, ವಿಶಾಲ್ ರೂಪಾ ಹೆಗ್ಡೆ, ಆವಿಷ್ಕಾ, ವೀರೆನ್, ವೈಷ್ಣವಿ ಹಾಗೂ ದಕ್ಷಿಣ ಕನ್ನಡ , ಉಡುಪಿ, ಕಾಸರಗೋಡು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ಬೃಹತ್ ಸಂಖ್ಯೆಯ ಜನಸ್ತೋಮ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಪ ನಮನ ಸಲ್ಲಿಸಿದರು.







