ಮಂಗಳೂರು ವಿ.ವಿ.44ನೇ ವಾರ್ಷಿಕ ಘಟಿಕೋತ್ಸವ : ಪದವಿ ಪ್ರಮಾಣ ಪತ್ರದ ಶುಲ್ಕ ಪಾವತಿಗೆ ಸೂಚನೆ

ಮಂಗಳೂರು,ಡಿ.12: ಮಂಗಳೂರು ವಿಶ್ವ ವಿದ್ಯಾನಿಲಯದ 44ನೇ ವಾರ್ಷಿಕ ಘಟಿಕೋತ್ಸವವು 2026ರ ಮಾರ್ಚ್ ನಲ್ಲಿ ನಡೆಯಲಿದೆ. ಮಂಗಳೂರು ವಿವಿಯ ಎಲ್ಲಾ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಪೂರ್ಣಗೊಳಿಸಿ ಡಿ.31ರೊಳಗೆ ವಿವಿಧ ಪದವಿಗಳನ್ನು ಪಡೆಯಲು ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಘಟಿಕೋತ್ಸವದಲ್ಲಿ ದೃಢೀಕರಿಸಲಾಗುತ್ತದೆ.
2025ರ ಅಕ್ಟೋಬರ್/ನವೆಂಬರ್/ಡಿಸೆಂಬರ್ ನಲ್ಲಿ ನಡೆಯುವ 1,3, ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಪುನಾರಾವರ್ತಿತ ಅಭ್ಯರ್ಥಿಗಳ ಯಾದಿಯು ಸೇರುವುದಿಲ್ಲ. ಈ ಘಟಿಕೋತ್ಸವದಲ್ಲಿ ಪದವಿ ಪಡೆಯಲು ಅರ್ಹರಾದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಣೆ ನಡೆಯಲಿದೆ.
ಪದವಿ 1,300 ರೂ, ಸ್ನಾತ್ತಕೋತ್ತರ ಪದವಿ 1,850 ರೂ, ಪಿಎಚ್ಡಿ 3,200 ರೂ., ಡಿಎಸ್ಸಿ/ಡಿಲಿಟ್ 10,200 ರೂ. ಪ್ರಮಾಣ ಪತ್ರದ ಶುಲ್ಕವಾಗಿದೆ. ಪಿಎಚ್ಡಿ/ಡಿಎಸ್ಸಿ/ಡಿಲಿಟ್ ಪದವಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು ಅರ್ಜಿಯೊಂದಿಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಬೇಕು. ಎಲ್ಲಾ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳ ಅರ್ಹ ವಿದ್ಯಾರ್ಥಿಗಳು ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್ ಶಾಖೆಗಳ ಮೂಲಕ ವಿಶ್ವವಿದ್ಯಾನಿಲಯದ ನಿಧಿಗೆ ಜಮೆ ಆಗುವಂತೆ ಚಲನ್ ಮೂಲಕ ಅಥವಾ ಲಿಂಕ್ https://onlinesbi.sbi.bank.in/sbicollect/icollecthome.htm (Educational institution- mangalore university) CxÀªÁ www.mangaloreuniversity.ac.in (online fees collection) ಮೂಲಕ ಪಾವತಿಸಿ ರಶೀದಿಯನ್ನು ವಿವಿಯಿಂದ ನೀಡಲ್ಪಟ್ಟ ಅಂತಿಮ ಸೆಮಿಸ್ಟರ್ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಕುಲಸಚಿವರ ಕಚೇರಿಗೆ ನಿಗದಿತ ನಮೂನೆಯಲ್ಲಿ ಡಿ.31ರೊಳಗೆ ಸಲ್ಲಿಸಬೇಕು ಎಂದು ಕುಲಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







