ಮಂಗಳೂರು | ವಿದ್ಯಾ ಜೀವನ ಅಮೃತ ಟ್ರಸ್ ಕಚೇರಿ ಉದ್ಘಾಟನೆ

ಮಂಗಳೂರು, ನ.18: ನಗರದ ಪಾಲ್ದನೆಯಲ್ಲಿರುವ ರೋಹನ್ ಬಡಾವಣೆಯಲ್ಲಿ ವಿದ್ಯಾ ಜೀವನ ಅಮೃತ ಟ್ರಸ್ಟ್(ರಿ)ನ ಕಚೇರಿಯನ್ನು ಪ್ರವರ್ತಕ ಡೆನ್ನಿಸ್ ಮಸ್ಕರೇನಸ್ ಉದ್ಘಾಟಿಸಿದರು.
ಸಂತ ತೆರೆಸಾ ಚರ್ಚಿನ ಪ್ರಧಾನ ಧರ್ಮಗುರು ವಂ.ಪಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಆಶೀವರ್ಷಚನ ನೀಡಿದರು.
ಕಾರ್ಯಕ್ರಮದಲ್ಲಿ ರೋಹನ್ ಕೋಆರ್ಪರೇಶನ್ ನ ನಿರ್ದೇಶಕ ಡಿಯೋನ್ ಮೊಂತೇರೊ, ಅನಿವಾಸಿ ಉದ್ಯಮಿ ಮೈಕಲ್ ಡಿಸೋಜ, ಸಿಯೋನ ಆಶ್ರಮದ ಯು.ಸಿ. ಪೌಲೋಸ್, ಯಾನ್ ಪೌಂಡೇಶನ್ನ ಹೇಮಾಚಾರ್ಯ, ರೋಶನ್ ಬೆಳ್ಮನ್, ವಂ. ಪಾ. ಸತೀಶ, ವಂ. ಪಾ. ಸ್ಟ್ಯಾನಿ ಡಿಸೋಜ, ಭಗಿನಿ ಶೈಲಾ, ಭಗಿನಿ ಸುನಿತಾ ಚಿತ್ರದುರ್ಗ, ಪ್ರವೀಣ್ ತಾವ್ರೊ, ವಿಲ್ಫ್ರೆಡ್ ಸಲ್ಡಾನಾ ಉಪಸ್ಥಿತರಿದ್ದರು.
Next Story





