ಮಂಗಳೂರು | ಮೃತದೇಹದ ಗುರುತು ಪತ್ತೆಗೆ ಮನವಿ

ಸಾಂದರ್ಭಿಕ ಚಿತ್ರ | PC : PTI
ಮಂಗಳೂರು, ನ.26: ನಗರದ ಬಲ್ಮಠ ರಸ್ತೆಯಲ್ಲಿರುವ ದೀಪಕ್ ಅಟೋ ಸ್ಪೇರ್ ಅಂಗಡಿಯ ಎದುರು ಬಿದ್ದುಕೊಂಡಿದ್ದ ಸುಮಾರು 50-55 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ನ.24ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.
ಚಹರೆ: 5.11 ಅಡಿ ಎತ್ತರ, ಗೋಧಿ ಮೈ ಬಣ್ಣ, ದೃಢಕಾಯ ಶರೀರದ ಈ ವ್ಯಕ್ತಿ ಗ್ರೇ ಬಣ್ಣದ ಪ್ಯಾಂಟ್ ಧರಿಸಿದ್ದರು. ಈ ಮೃತದೇಹದ ಗುರುತು ಸಿಕ್ಕಲ್ಲಿ ಬಂದರು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





