ಮಂಗಳೂರು| ಅಶ್ರಫ್ ಗುಂಪು ಹತ್ಯೆ ಪ್ರಕರಣ: ಪ್ರಮುಖ ಆರೋಪಿಗಳ ಜಾಮೀನು ಅರ್ಜಿ ವಜಾ

(ಮುಹಮ್ಮದ್ ಅಶ್ರಫ್)
ಮಂಗಳೂರು, ಆ.21: ನಗರ ಹೊರವಲಯದ ಕುಡುಪು ಬಳಿ ಎ.27ರಂದು ನಡೆದ ಕೇರಳದ ವಯನಾಡಿನ ಮುಹಮ್ಮದ್ ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಸಚಿನ್ ಟಿ. (26) ಮತ್ತು ಮಂಜುನಾಥ್ (32) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ವಜಾಗೊಳಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಜಗದೀಶ್ ವಿ.ಎನ್. ಅಪರಾಧದ ಸ್ವರೂಪ ಮತ್ತು ತೀವ್ರತೆಯ ಕಾರಣದಿಂದಾಗಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
Next Story





