ಮಂಗಳೂರು| ಕುಡುಪುವಿನಲ್ಲಿ ಅಶ್ರಫ್ ಗುಂಪು ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

ಮುಹಮ್ಮದ್ ಅಶ್ರಫ್
ಮಂಗಳೂರು, ಜು.7: ನಗರದ ಹೊರವಲಯದ ಕುಡುಪುವಿನಲ್ಲಿ ಎ. 27ರಂದು ನಡೆದ ವಯನಾಡಿನ ಅಮಾಯಕ ಯುವಕ ಮುಹಮ್ಮದ್ ಅಶ್ರಫ್ ಗುಂಪು ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಸೋಮವಾರ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದೆ.
ಪ್ರಕರಣದ 2ನೇ ಆರೋಪಿ ದೇವದಾಸ್ ಮತ್ತು 5ನೇ ಆರೋಪಿ ದೀಕ್ಷಿತ್ ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.
ಪ್ರಕರಣದ 1ನೇ ಆರೋಪಿ ಸಚಿನ್ ಟಿ, 3ನೇ ಆರೋಪಿ ಮಂಜುನಾಥ್ ಮತ್ತು 4ನೇ ಆರೋಪಿ ನಟೇಶ್ ಎಂಬವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜೂ.30ರಂದು ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿತ್ತು.
Next Story





