ಮಂಗಳೂರು | ಬ್ಯಾಟರಿ ಕಳವು : ಪ್ರಕರಣ ದಾಖಲು

ಮಂಗಳೂರು, ಡಿ.11: ಕಾರ್ಮಿಕ ಇಲಾಖೆಯ ಎರಡು ಸಂಚಾರಿ ಆರೋಗ್ಯ ಘಟಕ ಬಸ್‌ನಿಂದ ಸುಮಾರು 40 ಸಾವಿರ ರೂ. ಮೌಲ್ಯದ ಐದು ಬ್ಯಾಟರಿಗಳನ್ನು ಕಳವು ಮಾಡಿದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡೂ ಬಸ್ಸಿನ ಚಾಲಕರು ಬಸ್ಸನ್ನು ಡಿ.6ರಂದು ಸಂಜೆ 5 ಗಂಟೆಗೆ ಪದವು ಗ್ರಾಮದ ಭದ್ರಕಾಳಿ ದೇವಸ್ಥಾನ ರಸ್ತೆಯ ಕಾರ್ಮಿಕ ಕಚೇರಿ ಬಳಿ ನಿಲ್ಲಿಸಿದ್ದರು. ಡಿ.8ರಂದು ಬೆಳಗ್ಗೆ ಬಂದಾಗ ಒಂದು ಬಸ್ಸಿನಲ್ಲಿ ಅಳವಡಿಸಿದ್ದ ಬ್ಯಾಟರಿ ಮತ್ತು ಯುಪಿಎಸ್ ಬ್ಯಾಟರಿ ಹಾಗೂ ಇನ್ನೊಂದು ಬಸ್ಸಿನಿಂದ ಎರಡು ಯುಪಿಎಸ್ ಬ್ಯಾಟರಿಗಳನ್ನು ಕಳವು ಮಾಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Next Story





