ಮಂಗಳೂರು | ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನಕ್ಕೆ ಚಾಲನೆ

ಮಂಗಳೂರು, ನ.24: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಇಂದು ತನ್ನ ಪ್ರಮುಖ ಬ್ರೈಡ್ಸ್ ಆಫ್ ಇಂಡಿಯಾ (ಭಾರತದ ವಧುಗಳ) ಅಭಿಯಾನದ 15ನೇ ಆವೃತ್ತಿಯನ್ನು ಅನಾವರಣಗೊಳಿಸಿದೆ.
ಇದು ಭಾರತದ ಅತಿದೊಡ್ಡ ಮತ್ತು ಅತ್ಯಂತ ನಿರೀಕ್ಷಿತ ವಧುವಿನ ಚಿನ್ನಾಭರಣಗಳ ಅಭಿಯಾನವಾಗಿದೆ.
ಈ ವರ್ಷದ ಆವೃತ್ತಿಯು 22 ವಧುಗಳು ಮತ್ತು 10 ತಾರಾ ನಟಿಮಣಿಗಳನ್ನು ಒಂದೆಡೆ ಸೇರಿಸಲಿದ್ದು, ಇವರಲ್ಲಿ ಶ್ರೀನಿಧಿ ಶೆಟ್ಟಿ, ಕಾರ್ತಿ, ಎನ್ಟಿಆರ್, ಆಲಿಯಾ ಭಟ್, ಕರೀನಾ ಕಪೂರ್ ಖಾನ್, ಅನಿಲ್ ಕಪೂರ್, ರುಕ್ಮಿಣಿ ಮೈತ್ರಾ, ಸವ್ಯಸಾಚಿ ಮಿಶ್ರಾ, ಪ್ರಾರ್ಥನಾ ಬೆಹೆರೆ ಮತ್ತು ಮಾನಸಿ ಪಾರೇಖ್ ಮತ್ತಿತರ ಖ್ಯಾತನಾಮರು ಸೇರಿದ್ದಾರೆ. ಇವರೆಲ್ಲರ ಭಾಗವಹಿಸುವಿಕೆಯು ಈ ಅಭಿಯಾನದ ಅಗಾಧತೆ, ವೈವಿಧ್ಯತೆ ಮತ್ತು ಗಾಢ ಭಾವನಾತ್ಮಕತೆಯನ್ನು ಅರ್ಥಪೂರ್ಣವಾಗಿ ಪ್ರತಿಬಿಂಬಿಸಲಿದೆ ಎಂದು ಅಧ್ಯಕ್ಷ ಎಂ.ಪಿ.ಅಹಮ್ಮದ್ ಪ್ರಕಟನೆಯಲ್ಲಿ ಹೇಳಿದ್ದಾರೆ.
ಈ ಆವೃತ್ತಿಯು ಮುಖ್ಯವಾಗಿ ದೇಶದ ಸಾಂಸ್ಕೃತಿಕ ವೈವಿಧ್ಯತೆಯ ವರ್ಣರಂಜಿತ ಲೋಕದ ಮೇಲೆ ಬೆಳಕು ಚೆಲ್ಲಲಿದ್ದು, ವಿಶಿಷ್ಟ ವಧುವಿನ ಆಭರಣಗಳನ್ನು ಒಂದೆಡೆ ಪ್ರದರ್ಶಿಸಲಿದೆ. ಇವುಗಳಲ್ಲಿ ಭಾರತದ ಪರಂಪರೆ ಮತ್ತು ದೇವಾಲಯ ಕಲೆಯಿಂದ ಪ್ರೇರಿತವಾದ ಡಿವೈನ್ ಕಲೆಕ್ಷನ್, ಮಾಣಿಕ್ಯಗಳು, ಪಚ್ಚೆಗಳು ಮತ್ತು ನೀಲಮಣಿಗಳನ್ನು ಒಳಗೊಂಡಿರುವ ರತ್ನ-ಸಮೃದ್ಧ ಪ್ರೀಶಿಯಾ ಕಲೆಕ್ಷನ್ ಮತ್ತು ಭಾರತದ ಸಾಂಸ್ಕೃತಿಕ ಲೋಕದ ಸಮಕಾಲೀನ ಆದರೆ ಸಂಪ್ರದಾಯ ಅಳವಡಿಸಿಕೊಂಡಿರುವ ವಜ್ರ ಸಂಗ್ರಹವೂ ಇದರಲ್ಲಿದೆ ಎಂದು ವಿವರಿಸಿದ್ದಾರೆ.







