ಮಂಗಳೂರು | ಕಲ್ಕೂರಾ ಪ್ರತಿಷ್ಠಾನದಿಂದ ಕ್ಯಾಲೆಂಡರ್ ಬಿಡುಗಡೆ

ಮಂಗಳೂರು, ಡಿ.4: ಕಲ್ಕೂರ ಪ್ರತಿಷ್ಠಾನದಿಂದ ಮುದ್ರಿಸಲಾದ 2026ನೇ ಇಸವಿಯ ಸಾಂಪ್ರದಾಯಿಕ ಕ್ಯಾಲೆಂಡರನ್ನು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಮಠದ ವೃಂದಾವನದ ಸಾನಿಧ್ಯದಲ್ಲಿ ಸುಭುದೇಂದ್ರ ತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಮೈಸೂರಿನ ಶ್ರೀನಿವಾಸ್ ಪ್ರಸಾದ್, ಯುಗಪುರುಷದ ಭುವನಾಭಿರಾಮ ಉಡುಪ, ರಾಘವೇಂದ್ರ ಮಠದ ಅನಂತ ಆಚಾರ್ಯ, ಕಲ್ಕೂರ ಪ್ರತಿಷ್ಠಾನದ ವಿಶ್ವಸ್ಥ ಜನಾರ್ದನ ಹಂದೆ, ಅಶ್ವತ್ಥಾಮ ರಾವ್ ಮತ್ತಿತರರು ಉಪಸ್ಥಿತರಿದ್ದರು.
Next Story





