Mangaluru | ಪಣಂಬೂರು ಮೊಗವೀರ ಸಭಾ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

ಮಂಗಳೂರು, ನ.14: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ ಹಾಗೂ ಪಣಂಬೂರು ಮೊಗವೀರ ಸಭಾದ ಆಶ್ರಯದಲ್ಲಿ ಪಣಂಬೂರು ಮೊಗವೀರ ಸಭಾ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ನೂರಾಬಿ, H.K.N.S. ಸಂಸ್ಥೆಯ ಪ್ರಭಾಕರ್ ಗಟ್ಟಿ, ಆಯಿಷಾ, ಆಶಾ ಕಾರ್ಯಕರ್ತೆ ಮಾಲತಿ ಮತ್ತು ಶರ್ಮಿಳಾ ಉಪಸ್ಥಿತರಿದ್ದರು.
ಮಕ್ಕಳಿಗಾಗಿ ಆಟೋಟ ಸ್ಪರ್ಧೆಗಳು ನಡೆಯಿತು. ಸ್ಪರ್ಧೆಗಳ ವಿಜೇತರಿಗೆ ಸೌಮ್ಯ ಬಹುಮಾನ ವಿತರಿಸಿದರು.
ಈ ವೇಳೆ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆ ಸ್ವಾಗತಿಸಿದರು. ಶರ್ಮಿಳಾ ನಿರೂಪಣೆ ನಡೆಸಿದರೆ, ಮಾಲತಿ ಧನ್ಯವಾದ ಸಲ್ಲಿಸಿದರು.
Next Story





