ಮಂಗಳೂರು | ಡಿ.14: ಕೃತಿ ಬಿಡುಗಡೆ ಮತ್ತು ಕವಿಗೋಷ್ಠಿ

ಸಾಂದರ್ಭಿಕ ಚಿತ್ರ
ಮಂಗಳೂರು,ಡಿ.11: ಬಹು ಓದು ಬಳಗ ಮಂಗಳೂರು ಹಾಗೂ ಆಕೃತಿ ಆಶಯ ಪಬ್ಲಿಕೇಷನ್ ಮಂಗಳೂರು ಸಹಯೋಗದಲ್ಲಿ ಡಾ. ಉಷಾ ಪ್ರಕಾಶ್ ಹಾಗೂ ಡಾ. ರಾಘವೇಂದ್ರ ಜಿಗಳೂರ ಸಂಪಾದಕತ್ವದ ಕೃತಿ ಕರಾವಳಿ ಕವನಗಳು’ ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಡಿ.14ರಂದು ಬಿಡುಗಡೆಗೊಳ್ಳಲಿದೆ.
ಮೈಸೂರು ವಿವಿಯ ಶಾಸ್ತ್ರೀಯ ಅಧ್ಯಯನ ಕೇಂದ್ರದ ಸಂಶೋಧಕ ಡಾ. ಚಲಪತಿ ಆರ್. ಕೃತಿ ಬಿಡುಗಡೆಗೊಳಿಸಲಿದ್ದಾರೆ. ಕಾಸರಗೋಡಿನ ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಧ್ಯಾಪಕಿ ಡಾ.ನಿಕೇತನ ಪುಸ್ತಕ ವಿಮರ್ಶೆ ಮಾಡಲಿದ್ದಾರೆ. ವಿಮರ್ಶಕ ಅರವಿಂದ ಚೊಕ್ಕಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕವಿಗೋಷ್ಠಿಯಲ್ಲಿ ಉಪನ್ಯಾಸಕ ರಘು ಇಡ್ತಿದು ಆಶಯ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





