ಮಂಗಳೂರು | ರಾಷ್ಟ್ರಮಟ್ಟದ ಸ್ಕೂಲ್ ಗೇಮ್ಸ್ ಈಜು ಸ್ಪರ್ಧೆ : ಧೃತಿ ಫೆರ್ನಾಂಡಿಸ್ ಚಿನ್ನದ ಪದಕ

ಮಂಗಳೂರು, ಡಿ.12: ಹೊಸದಿಲ್ಲಿಯಲ್ಲಿ ಶುಕ್ರವಾರದಿಂದ ಆರಂಭಗೊಂಡ ರಾಷ್ಟ್ರಮಟ್ಟದ ಸ್ಕೂಲ್ ಗೇಮ್ಸ್ ಈಜು ಸ್ಪರ್ಧೆಯ ಬಾಲಕಿಯರ 19 ವಯೋಮಾನದ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ರಿಯಾನಾ ಧೃತಿ ಫರ್ನಾಂಡಿಸ್ ಚಿನ್ನದ ಪದಕ ಗೆದ್ದಿದ್ದಾರೆ.
ಈ ಸ್ಪರ್ಧೆಯ 50 ಮೀ. ಬ್ರೆಸ್ಟ್ ಸ್ಟ್ರೋಕ್ನ್ ನ 34.84 ಸೆಕೆಂಡ್ ನಲ್ಲಿ ಈಜಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಈಕೆ ನಗರದ ಸಂತ ಅಲೋಷಿಯಸ್ ಕಾಲೇಜಿನ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದಾರೆ.
ಅಲೋಶಿಯಸ್ ಪದವಿ ಕಾಲೇಜಿನ ಈಜುಕೊಳದಲ್ಲಿ ವೀ ವನ್ ಅಕ್ವಾ ಸೆಂಟರ್ ನಲ್ಲಿ ಮುಖ್ಯ ತರಬೇತುದಾರ ಲೋಕರಾಜ್ ವಿ.ಎಸ್. ವಿಟ್ಲ ಹಾಗೂ ತರಬೇತುದಾರರಾದ ಗಗನ್ ಜಿ. ಪ್ರಭು ಮತ್ತು ಸಂಜಯ್ ಉಳ್ಳವೇಕರ್ರಿಂದ ತರಬೇತಿ ಪಡೆಯುತ್ತಿದ್ದಾರೆ.
Next Story





