ಮಂಗಳೂರು| ಸಿಟಿ ಗೋಲ್ಡ್‌ನಲ್ಲಿ ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಆರಂಭ

ಮಂಗಳೂರು, ಡಿ.19: ನಗರದ ಕಂಕನಾಡಿಯಲ್ಲಿರುವ ಪ್ರತಿಷ್ಠಿತ ಚಿನ್ನ ಮತ್ತು ವಜ್ರಾಭರಣ ಮಳಿಗೆ ʼಸಿಟಿ ಗೋಲ್ಡ್ ಡೈಮಂಡ್ಸ್ʼ ನಲ್ಲಿ 2026ರ ಜನವರಿ 15ರವರೆಗೆ ನಡೆಯುವ THE HOPE ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸುಮಾರು 12 ವರ್ಷದ ಹಿಂದೆಯೇ ತಾನು ತನ್ನ ಮಗಳಿಗೆ ಕಾಸರಗೋಡಿನಲ್ಲಿದ್ದ ಸಿಟಿ ಗೋಲ್ಡ್ ಮಳಿಗೆಯಿಂದ ಚಿನ್ನಾಭರಣ ಖರೀದಿಸಿದ್ದೆ. ನಂಬಿಕೆ ಮತ್ತು ವಿಶ್ವಾಸಕ್ಕೆ ಅರ್ಹವಾದ ಚಿನ್ನ ಮತ್ತು ವಜ್ರಾಭರಣ ಮಳಿಗೆಗಳ ಪೈಕಿ ಸಿಟಿ ಗೋಲ್ಡ್ ಮುಂಚೂಣಿಯಲ್ಲಿದೆ. ಗ್ರಾಹಕರ ಹಿತಕ್ಕೆ ಸದಾ ಬದ್ಧವಾಗಿರುವ ಸಿಟಿ ಗೋಲ್ಡ್ ಮಳಿಗೆಯು ಸಮಾಜಮುಖಿ ಸೇವೆಯ ಮೂಲಕವೂ ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿದೆ. ಉದ್ಯಮದಲ್ಲಿ ಯಶಸ್ಸು ಸಾಧಿಸುವುದರೊಂದಿಗೆ ಸಮಾಜ ಸೇವೆಯಲ್ಲೂ ಸಿಟಿ ಗೋಲ್ಡ್ ಸಂಸ್ಥೆಯು ಮತ್ತಷ್ಟು ತೊಡಗಿಸಿಕೊಳ್ಳಬೇಕು ಎಂದರು.
ಮುಖ್ಯ ಆತಿಥಿಗಳಾಗಿ ಸೋಷಿಯಲ್ ಇನ್ಫ್ಲುಯೆನ್ಸರ್‌ಗಳಾದ ಅನೀಶ್ ಮತ್ತು ನೇಹಾ ಹಾಗೂ ಉದ್ಯಮಿಗಳಾದ ಉಮ್ಮರ್ ಫಾರೂಕ್, ರಿಯಾಝ್ ಅಶ್ರಫ್, ಆಶಿಕ್ ಕುಕ್ಕಾಜೆ, ಮೇಕಪ್ ಆರ್ಟಿಸ್ಟ್‌ಗಳಾದ ನಿಶಾ, ಸಹನಾ ಬಾನು ಭಾಗವಹಿಸಿ ಶುಭ ಹಾರೈಸಿದರು.
ಸಿಟಿ ಗೋಲ್ಡ್‌ನ ಎಜಿಎಂ ಮುಹಮ್ಮದ್ ಅಝ್ಮಲ್, ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಅಸಿಸ್ಟೆಂಟ್ ಬ್ರಾಂಚ್ ಮ್ಯಾನೇಜರ್ ಅಝೀಝ್ ಎಸ್.ಎ.., ಸೇಲ್ಸ್ ಮ್ಯಾನೇಜರ್ ಇಮ್ರಾನ್ ವಿ., ಮಾರ್ಕೆಟಿಂಗ್ ಮ್ಯಾನೇಜರ್ ಮುಹಮ್ಮದ್ ರಹೀಸ್ ಮತ್ತು ಸಿಟಿಗೋಲ್ಡ್‌ನ ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ನಮಿತಾ ಅಂತರ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
*THE HOPE ವಜ್ರಾಭರಣ ಪ್ರದರ್ಶನ ಪ್ರಯುಕ್ತ ಗ್ರಾಹಕರಿಗೆ ವಜ್ರಾಭರಣ ಖರೀದಿಯಲ್ಲಿ 1 ಕ್ಯಾರೆಟ್‌ಗೆ 15,000 ರೂ. ರಿಯಾಯಿತಿ ನೀಡಲಾಗುವುದು. ಇತರ ಬ್ರಾಂಡ್‌ನ ವಜ್ರಾಭರಣವನ್ನು ಉತ್ತಮ ದರದೊಂದಿಗೆ ವಿನಿಮಯ ಮಾಡಿಕೊಡಲಾಗುವುದು. ಯಾವುದೇ ಬ್ರಾಂಡ್‌ನ ವಜ್ರಾಭರಣಗಳನ್ನು ಉಚಿತ ಸರ್ವಿಸ್ ಮಾಡಿ ಕೊಡಲಾಗುವುದು. ದೇಶ ವಿದೇಶಗಳ ವಜ್ರಾಭರಣ ಪ್ರದರ್ಶನ ನಡೆಯಲಿದೆ ಎಂದು ಸಿಟಿ ಗೋಲ್ಡ್ ಪ್ರಕಟನೆಯಲ್ಲಿ ತಿಳಿಸಿದೆ.







