ಮಂಗಳೂರು | ಮಾದಕ ವಸ್ತು ಸೇವನೆ ಆರೋಪ: ಓರ್ವನ ಬಂಧನ

ಮಂಗಳೂರು, ಜ.26: ನಗರದ ಜೆಪ್ಪು ಕುಡ್ಪಾಡಿ ಮೈದಾನದ ಬಳಿ ಅಮಲು ಪದಾರ್ಥ ಸೇವಿಸಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ವಿಜೇಶ್ ಕುಮಾರ (38) ಬಂಧಿತ ಆರೋಪಿ. ಜ. 23 ರಂದು ರಾತ್ರಿ 9ಗಂಟೆಯ ಹೊತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಲಕ್ಷ್ಮಣ್ ಸಾಲಾಟಾಗಿ ಎಂಬವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಜೆಪ್ಪು ಕುಡ್ಪಾಡಿ ಮೈದಾನ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡಿಕೊಂಡು ಅಮಲಿನಲ್ಲಿ ಸಾರ್ವಜನಿಕರಿಗೆ ತೊಂದರೆಪಡಿಸುತ್ತಿದ್ದವನನ್ನು ಕಂಡು ಆತನನ್ನು ಹಿಡಿದು ವಿಚಾರಿಸಿದಾಗ ಆತನು ಮಾದಕ ವಸ್ತು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಬಳಿಕ ಆತನನ್ನು ಮಂಗಳೂರು ನಗರ ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆಗೆ ಒಳಪಡಿಸಿದಾಗ ಆತ ಮಾದಕ ವಸ್ತು ಸೇವನೆ ಮಾಡಿರುವುದು ದೃಡಪಟ್ಟಿದೆ ಎಂದು ತಿಳಿದು ಬಂದಿದೆ.
ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





