ಮಂಗಳೂರು| ಫೇಸ್‌ಬುಕ್, ವಾಟ್ಸ್‌ಆ್ಯಪ್ ಲಿಂಕ್ ಕ್ಲಿಕ್: ಲಕ್ಷಾಂತರ ರೂ. ಕಳೆದುಕೊಂಡ ಬಳಿಕ ದೂರು
ಮೂರು ಪ್ರತ್ಯೇಕ ಪ್ರಕರಣ ದಾಖಲು

ಮಂಗಳೂರು: ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ನ ಲಿಂಕ್ ಒತ್ತಿ ಲಕ್ಷಾಂತರ ರೂ. ಕಳೆದುಕೊಂಡ ಬಳಿಕ ಕಂಕನಾಡಿ ನಗರ ಠಾಣೆಗೆ 2 ಮತ್ತು ಪಾಂಡೇಶ್ವರ ಪೊಲೀಸ್ ಠಾಣೆಗೆ 1 ಹೀಗೆ ಮೂರು ದೂರುಗಳು ದಾಖಲಾಗಿವೆ.
*ಮೇ 7ರಂದು ಮೊಬೈಲ್‌ನಲ್ಲಿ ಫೇಸ್‌ಬುಕ್ ನೋಡುವಾಗ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ Online Trading ಬಗ್ಗೆ ನೀಡಿದ ಮಾಹಿತಿಯ ಪ್ರಚಾರದ ವೀಡಿಯೋವನ್ನು ತಾನು ಲಿಂಕ್ ಕ್ಲಿಕ್ ಮಾಡಿ ಅದರಲ್ಲಿ ದಾಖಲಾತಿ ಮತ್ತು ವಿಳಾಸವನ್ನು ನೋಂದಾಯಿಸಿದ್ದೆ. ನಂತರ ನನ್ನ ಮೊಬೈಲ್ ಗೆ ಬಂದ ಕರೆ ಸ್ವೀಕರಿಸಿದಾಗ ಕರೆ ಮಾಡಿದ ವ್ಯಕ್ತಿ ಮನೀಶ್ ಎಂ. ಎಂದು ತನ್ನನ್ನು ಪರಿಚಯಿಸಿ ಫ್ರೀ ರಿಜಿಸ್ಟ್ರೇಶನ್ ಎನ್ನುತ್ತಾ 23,326 ರೂ.ವನ್ನು ಪಡೆದುಕೊಂಡ. ಬಳಿಕ ಹಂತ ಹಂತವಾಗಿ ಬೇರೆ ಬೇರೆ ರೂಪದಲ್ಲಿ ತನ್ನಿಂದ 10,64,188 ರೂ.ವನ್ನು ಪಡೆದು ವಂಚಿಸಿದ್ದಾರೆ ಎಂದು ಹಣ ಕಳಕೊಂಡ ವ್ಯಕ್ತಿ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.
*ಜನವರಿ 8ರಂದು ಮೊಬೈಲ್‌ನಲ್ಲಿ ಫೇಸ್‌ಬುಕ್ ನೋಡುವಾಗ Online Trading ಇದ್ದ ಲಿಂಕ್ ಕ್ಲಿಕ್ ಮಾಡಿದ್ದೆ. ನಂತರ ತನ್ನ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿ ತನ್ನನ್ನು ಆದಿತ್ಯ ಎಂದು ಪರಿಚಯ ಮಾಡಿಕೊಂಡು 23,193 ರೂ.ವನ್ನು ಪಡೆದುಕೊಂಡ. ಹಾಗೇ ಹಂತ ಹಂತವಾಗಿ 4,96,583 ರೂ.ಆರೋಪಿಗಳು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿ ವಂಚಿಸಿದ್ದಾರೆ ಎಂದು ಹಣ ಕಳಕೊಂಡ ವ್ಯಕ್ತಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
*ಜುಲೈ 4ರಂದು ವಾಟ್ಸ್‌ಆ್ಯಪ್‌ಗೆ ಬಂದ ಲಿಂಕನ್ನು ತಾನು ಕ್ಲಿಕ್ ಮಾಡಿದಾಗ ಟೆಲಿಗ್ರಾಂ ಆ್ಯಪ್‌ನ ಮಿಶ್ಬಾ ಶೇಕ್ ಎಂದು ತನ್ನನ್ನು ಪರಿಚಯಿಸಿಕೊಂಡ ವ್ಯಕ್ತಿ ಟಾಸ್ಕ್ ನೀಡಿ ಹಂತ ಹಂತವಾಗಿ 4,57,000 ರೂ. ವರ್ಗಾಯಿಸಿಕೊಂಡಿದ್ದಾರೆ ಎಂದು ಹಣ ಕಳಕೊಂಡ ವ್ಯಕ್ತಿ ಪಾಂಡೇಶ್ವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.







