ಮಂಗಳೂರು | ಮಾದಕ ವಸ್ತು ಸೇವನೆ ಆರೋಪ: ನಾಲ್ವರ ಸೆರೆ

ಮಂಗಳೂರು, ಡಿ.11: ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇರೆಗೆ ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಮಂದಿಯನ್ನು ಉರ್ವ, ಮಂಗಳೂರು ಗ್ರಾಮಾಂತರ ಮತ್ತು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಕುಂಟಿಕಾನ ಫ್ಲೈ ಓವರ್ ಬಳಿ ಕಸಬಾ ಬೆಂಗ್ರೆಯ ಮುಹಮ್ಮದ್ ಸುಹೈಲ್ ಮತ್ತು ಮುಹಮ್ಮದ್ ಸಫ್ವಾನ್ ನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ಪದವು ಗ್ರಾಮದ ಶಕ್ತಿನಗರದ ನಾಲ್ಯಪದವು ಮೈದಾನದ ಬಳಿ ಅತ್ತಾವರ ಬಾಬುಗುಡ್ಡೆ ನಿವಾಸಿ ಚರಣ್ ಯಾನೆ ಚಲ್ಲು ಎಂಬಾತನನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
2024ರಲ್ಲಿ ಕಾವೂರು ಠಾಣೆಯಲ್ಲಿ ದಾಖಲಾಗಿದ್ದ ಎನ್ಡಿಪಿಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಆಯಿಂಜೆರಿ ಗ್ರಾಮದ ನಿವಾಸಿ, ಪ್ರಸಕ್ತ ದೇರಳಕಟ್ಟೆಯಲ್ಲಿ ವಾಸವಾಗಿರುವ ಮುಹಮ್ಮದ್ ಶಮ್ಮಾಸ್ ಎಂಬಾತನನ್ನು ಠಾಣೆಗೆ ಕರೆಸಿದಾಗ ಆತ ಮಾದಕ ವಸ್ತು ಸೇವಿಸಿದ್ದ ಕಾರಣ ಪೊಲೀಸರು ಮತ್ತೊಂದು ಎನ್ಡಿಪಿಎಸ್ ಪ್ರಕರಣ ದಾಖಲಿಸಿದ್ದಾರೆ.
Next Story





